News Karnataka Kannada
Monday, April 29 2024
ಮಂಗಳೂರು

ಗುತ್ತಿಗಾರನಲ್ಲಿ ಅಮಾನವೀಯ ಘಟನೆ,ಅಡಿಕೆ ಕದ್ದ ವಿಚಾರ ಬಾಲಕನಿಗೆ ಹಿಗ್ಗಾ-ಮುಗ್ಗಾ ಥಳಿತ

Kavur
Photo Credit :

ಮಂಗಳೂರು:ಅಡಿಕೆ ಕದ್ದ ನೆಪದಲ್ಲಿ ಗುತ್ತಿಗಾರಿನ ಹದಿನಾರು ವರ್ಷದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು ವಿಡಿಯೋ ವೈರಲ್ ಆಗುತ್ತಲೇ ಸಾರ್ವಜನಿಕ ಆಕ್ರೋಶ ಕೇಳಿ ಬಂದಿದ್ದರಿಂದ ಸುಬ್ರಹ್ಮಣ್ಯ ಠಾಣೆ ಪೊಲೀಸರು ಮೊದಲಿಗೆ ಸುಮೋಟೋ ಕೇಸ್ ದಾಖಲಿಸಿದ್ದರು ಅನಂತರ ಬಾಲಕನ ಹೆತ್ತವರ ಜತೆ ಬಂದು ಠಾಣೆಯಲ್ಲಿ ದೂರು ದಾಖಲಿಸಿದ್ದ

ಗುತ್ತಿಗಾರಿನ ಕಜೆ ಎಂಬಲ್ಲಿ ಅಕ್ಟೋಬರ್ ೨೭ರೆಂದು ಸಂಜೆ ಗಂಟೆ ಸುಮಾರಿಗೆ 7 ಘಟನೆ ನಡೆದಿತ್ತು ಹಣ್ಣಾದ ಅಡಿಕೆಯನ್ನು ಗೋಣಿಚೀಲದಲ್ಲಿ ತುಂಬಿಸಿ ಒಯ್ಯುತ್ತಿದ್ದ ಬಾಲಕನನ್ನು ಆತ ಕದ್ದು ತಂದ ನೆಪದಲ್ಲಿ ಅಡ್ಡಗಟ್ಟಿದ ಯುವಕರು ಹಲ್ಲೆ ನಡೆಸಿದ್ದರು ಅಲ್ಲದೆ ದೊಣ್ಣೆಯಲ್ಲಿ ಹಲ್ಲೆ ನಡೆಸಿದ ವಿಡಿಯೋವನ್ನು ಅವರೇ ಮಾಡಿಕೊಂಡು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಹಲ್ಲೆ ನಡೆಸಿದವರು ಸ್ಥಳೀಯವಾಗಿ ಭಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡು ಅವರಾಗಿದ್ದು ಅಡಿಕೆ ಕದ್ದ ಬಾಲಕನಿಗೆ ಗೂಸ ನೀಡಿದ್ದಾಗಿ ವಿಡಿಯೋ ಹಂಚಿದ್ದರು . ಆದರೆ ಯುವಕರು ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿದ್ದರೂ ಪೊಲೀಸರು 23ದಿನಗಳ ಕಾಲ ಆರೋಪಿಗಳನ್ನು ಬಂಧಿಸಿರಲಿಲ್ಲ ಜೀವನ್ , ವರ್ಷಿತ್ , ಸಚಿನ್ , ಮೋಕ್ಷಿತ್ , ಸನತ್ , ಮುರಳಿ , ದಿನೇಶ್ , ಈಶ್ವರ್ , ಚಂದ್ರ , ಚೇತನ್ , ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು ಎಲ್ಲರೂ ಬಜರಂಗದಳ ಕಾರ್ಯಕರ್ತರಾಗಿದ್ದು ಗುತ್ತಿಗಾರು ಪೇಟೆಯಲ್ಲಿ ತಿರುಗಾಡಿಕೊಂಡಿದ್ದರು . ವಶಕ್ಕೆ ಪಡೆದು ವಿಚಾರಣೆ ನಡೆಸುವುದಕ್ಕೂ ಪೊಲೀಸರು ಮುಂದಾಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದರು ಆದರೆ ಆರೋಪಿಗಳು ಸುಳ್ಯ ಕೋರ್ಟ್ ಗೆ ರಾಜಾರೋಷದಿಂದ ಹಾಜರಾಗಿ ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಸ್ಟೇಷನ್ ಜಾಮೀನು ಆಗಬಲ್ಲ ಸೆಕ್ಷನ್ ಗಳನ್ನೇ ಎಫ್ಐಆರ್ ನಲ್ಲಿ ವಿಧಿಸಿದ್ದರಿಂದ ಸಹಜವಾಗಿ ಜಾಮೀನು ಆಗಿದೆ ಎನ್ನಲಾಗುತ್ತಿದೆ ನೈತಿಕ ಪೊಲೀಸ್ ಗಿರಿ ನಡೆಸುವ ರೀತಿಯಲ್ಲಿ ಕೃತ್ಯ ನಡೆದಿದೆ ಅಲ್ಲದೆ ಘಟನೆಗೆ ವಿಡಿಯೋ ಸಾಕ್ಷಿ ಇದ್ದರೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತಾಳಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳು ಜನರಲ್ಲಿ ಉಂಟಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು