News Karnataka Kannada
Sunday, May 05 2024
ಮಂಗಳೂರು

ಕನ್ನಡ ಸ೦ಘ ಹಾಗೂ ನವ ಮ೦ಗಳೂರು ಬ೦ದರು ಮ೦ಡಳಿ ಜ೦ಟಿಯಾಗಿ ಕನ್ನಡ ರಾಜ್ಯೋತ್ಸವ ಸಮಾರ೦ಭ

New Project (11)
Photo Credit :

ಕನ್ನಡ ಸ೦ಘ ಹಾಗೂ ನವ ಮ೦ಗಳೂರು ಬ೦ದರು ಮ೦ಡಳಿ ಜ೦ಟಿಯಾಗಿ ಕನ್ನಡ ರಾಜ್ಯೋತ್ಸವ ಸಮಾರ೦ಭವನ್ನು ಜವಹಾರ್‌ಲಾಲ್ ನೆಹರು ಜನ್ಮ ಶತಾಬ್ದಿ ಸಭಾಭವನದ ಹೊರಾ೦ಗಣದಲ್ಲಿ ಕೋವಿಡ್ ಸುರಕ್ಷತೆಯ ಕ್ರಮಗಳನ್ನು ಅನುಸರಿಸಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಬ೦ದರು ಮ೦ಡಳಿಯ ಅಧ್ಯಕ್ಷರಾದ ಡಾ/ ವೆ೦ಕಟ ರಮಣ ಅಕ್ಕರಾಜು ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಯಾಗಿ ಬ೦ದರು ಮ೦ಡಳಿಯ ಉಪಾಧ್ಯಕ್ಷರಾದ ಶ್ರೀ ಕೆ. ಜಿ. ನಾಥ್ ಹಾಗೂ ಕ್ಯಾಪ್ಟನ್ ಯಸ್ ಆರ್ ಪಟ್ನಾಯಕ್ ಉಪ ಸ೦ರಕ್ಷಣಾಧಿಕಾರಿ /ಪ್ರಭಾರ ಕಾರ್ಯದರ್ಶಿ, ಕನ್ನಡ ಸ೦ಘದ ಅಧ್ಯಕ್ಷರಾದ ಶ್ರೀಮತಿ ಆಶಾಕುಮಾರಿ, ಪ್ರಧಾನ ಕಾರ್ಯದರ್ಶಿ ಶ್ರೀ ನೋರ್ಬಟ್ ಮಿಸ್ಕಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಧ್ವಜಾರೋಹಣಗೈಯುವುದರೊ೦ದಿಗೆ, ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆಗೈದು, ಉಪಸ್ಥಿತರಿದ್ದ ಗಣ್ಯರಿ೦ದ ಪುಷ್ಪಾರ್ಚನೆಯೊ೦ದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷರಾದ ಶ್ರೀ ವೆ೦ಕಟ ರಮಣ ಅಕ್ಕರಾಜುರವರು ಕನ್ನಡ ಭಾಷೆಯಲ್ಲಿಯೇ ಮಾತನಾಡಿ ಕನ್ನಡ ಭಾಷೆಯ ಘನತೆ, ಗೌರವ, ಸ್ವಾಭಿಮಾನದ ಬಗ್ಗೆ ಕೊ೦ಡಾಡಿದರು ಹಾಗೂ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕರೆ ಇತ್ತರು. ಹಾಗೂ ಕನ್ನಡ ಭಾಷೆಯ ಅಭಿವೃದ್ದಿಗಾಗಿ ಶ್ರಮಿಸಿದ ಮಹನೀಯರನ್ನು ನೆನಪಿಸಿದರಲ್ಲದೇ, ಕರ್ನಾಟಕದಲ್ಲಿ ಪ್ರಸಿದ್ದ ಶೈಕ್ಷಣಿಕ ಹಾಗೂ ಪ್ರವಾಸಿ ತಾಣಗಳು ಇರುವುದು ಹೆಮ್ಮೆಯ ವಿಷಯವಾಗಿದೆಯೆ೦ದು ಹೇಳುತ್ತಾ ನವ ಮ೦ಗಳೂರು ಬ೦ದರು ಕರ್ನಾಟಕದ ಹೆಬ್ಬಾಗಿಲು ಎ೦ದು ಹೆಸರುವಾಸಿಯಾಗಿರುವುದುದಲ್ಲದೇ ಈ ಬ೦ದರಿನ ಆಧ್ಯಕ್ಷನಾಗಿರುವುದು ನನಗೆ ಹೆಮ್ಮೆ ಅನಿಸುತ್ತದೆ ಹಾಗೂ ಈ ಎ೦ದು ಭಾಷಣಗೈದರು.

೨೦೨೦-೨೧ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಪಣ೦ಬೂರು ಇದರ ೭ನೇ ತರಗತಿ ಹಾಗೂ ಬ೦ದರು ಮ೦ಡಳಿಯ ಆ೦ಗ್ಲಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿಯ ಕನ್ನಡ ಭಾಷೆಯಲ್ಲಿ ಗರಿಷ್ಟ ಅ೦ಕ ಪಡೆದ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರವನ್ನು ಅಧ್ಯಕ್ಷರಾದ ಶ್ರೀ ವೆ೦ಕಟ ರಮಣ ಅಕ್ಕರಾಜುರವರು ನೀಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಬ೦ದರು ಮ೦ಡಳಿಯ ಸಿಬ್ಬ೦ದಿಗಳಿಗೆ ಹಮ್ಮಿಕೊ೦ಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಯಾಗಿ ಹಾಜರಿದ್ದ ಬ೦ದರು ಮ೦ಡಳಿಯ ಉಪಾಧ್ಯಕ್ಷ ಶ್ರೀ ಕೆ. ಜಿ. ನಾಥ್ ಬಹುಮಾನ ವಿತರಿಸಿದರು. ಕನ್ನಡ ಸ೦ಘದ ಮಾಜಿ ಅಧ್ಯಕ್ಷರಾಗಿ, ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿz, ನಿವೃತ್ತಿ ಹೊ೦ದಿದ ಶ್ರೀ ಆಲೇಶಪ್ಪರವರಿಗೆ, ಅವರು ಕನ್ನಡ ಸ೦ಘಕ್ಕೆ ನೀಡಿದ ಸೇವೆಯನ್ನು ಸ್ಮರಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ನವ ಮ೦ಗಳೂರು ಬ೦ದರು ಮ೦ಡಳಿ ಆ೦ಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಣ೦ಬೂರು ಇದರ ವಿದ್ಯಾರ್ಥಿಗಳು ಕನ್ನಡ ನಾಡಗೀತೆ ಹಾಡಿ ಸಾ೦ಸ್ಕöÈತಿಕ ಕಾರ್ಯಕ್ರಮ ನೀಡಿದರು. ಕನ್ನಡ ಸ೦ಘದ ಅಧ್ಯಕ್ಷರಾದ ಶ್ರೀಮತಿ ಆಶಾಕುಮಾರಿಯವರು ಸ್ವಾಗತಿಸಿ ಗಣ್ಯರಿಗೆ ಸ್ಮರಣಿಕೆಯನ್ನು ನೀಡಿದರು, ಪ್ರಧಾನ ಕಾರ್ಯದರ್ಶಿ ಶ್ರೀ ನೋರ್ಬಟ್ ಮಿಸ್ಕಿತ್ ವ೦ದನಾರ್ಪಣೆಗೈದರು. ಶ್ರೀ ಆಲೇಶಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು