News Karnataka Kannada
Friday, May 03 2024
ಸಮುದಾಯ

ಎಪಿಡಿ ಪ್ರತಿಷ್ಠಾನದ ೫೦ನೇ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮ : ಮಂಗಳೂರು

New Project (9)
Photo Credit :

ಮಂಗಳೂರು : ಮಂಗಳೂರು ಮೂಲದ ಎಪಿಡಿ ಪ್ರತಿಷ್ಠಾನ ತಮ್ಮ ೫೦ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮಗಳ ಪೂರ್ಣಗೊಳಿಸುವಿಕೆಯನ್ನು ಎಪಿಡಿ ಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಅವರ ವಿಶೇಷ ಸಂದರ್ಶನದೊAದಿಗೆ ಆಚರಿಸಿದೆ. ಸಂದರ್ಶನವು ಮಂಗಳೂರು ನಗರದ ‘ಅಭಿವೃದ್ಧಿ ಆದ್ಯತೆಗಳು ಮತ್ತು ಮುಂದಿನ ಹಾದಿ’ ಎಂಬ ವಿಷಯದ ಮೇಲೆ ಕೇಂದ್ರೀಕರಿಸಿತ್ತು.
‘ಕನೆಕ್ಟಿಂಗ್ ದಿ ಡಾಟ್ಸ್’ ಎಂಬ ಶೀರ್ಷಿಕೆಯಡಿ ನಡೆದ ಸಂದರ್ಶನ ಪರಿಸರ ಮಾಲಿನ್ಯ ಕಡಿಮೆ ಗೊಳಿಸುವುದು, ತ್ಯಾಜ್ಯ ನಿರ್ವಹಣೆ ಮತ್ತು ಇತರ ಸುಸ್ಥಿರ ಅಭಿವೃದ್ಧಿ ಸಮಸ್ಯೆಗಳಿಗೆ ಸಂಬದಪಟ್ಟ ವಿಷಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತು. ನಮ್ಮ ಗುರಿಗಳು ವಾಸ್ತವಿಕವಾಗಿರುವುದು ಬಹಳ ಮುಖ್ಯ ಎಂದು ಅಬ್ದುಲ್ಲಾ ಎ. ರೆಹಮಾನ್ ಗಮನಿಸಿದರು.
“ಮಂಗಳೂರು ನಗರವು ಶೂನ್ಯ ತ್ಯಾಜ್ಯ ನಗರವಾಗಬೇಕೆಂದು ಬಯಸುವುದಾಗಿ ಮಹಾನಗರಪಾಲಿಕೆ ಹೇಳಿಕೆ ನೀಡಿದೆ. ಆದರೆ ಇದು ನಿಜವಾಗಿಯೂ ವಾಸ್ತವಿಕವೇ? ನನ್ನ ಅನಿಸಿಕೆ ಪ್ರಕಾರ ಶೂನ್ಯ ತ್ಯಾಜ್ಯ ಗುರಿಯ ೭೦-೮೦% ದಷ್ಟು ಅಂಕವನ್ನು ತಲುಪಲೂ ಕಷ್ಟವಾಗಬಹುದು. ಇದರ ಬದಲು ಶೂನ್ಯ ತ್ಯಾಜ್ಯ ಕ್ಯಾಂಪಸ್‌ಗಳು, ಅಪಾರ್ಟ್ಮೆಂಟ್‌ಗಳು, ಉದ್ಯಮ, ಮನೆ ಅಥವಾ ಕಚೇರಿಯಂತಹ ವಾಸ್ತವಿಕ ಮತ್ತು ಸಾಧಿಸಬಹುದಾದ ಪದಗಳಲ್ಲಿ ಅಂತಹ ಗುರಿಗಳನ್ನು ವ್ಯಾಖ್ಯಾನಿಸುವುದು ಉತ್ತಮ,” ಎಂದು ಅವರು ಹೇಳಿದರು.


ಅವರು ಮಂಗಳೂರು ನಗರ ಪರಿಸರ ಸ್ನೇಹಿ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು. “ನಮ್ಮ ಬೀದಿ ದೀಪಗಳನ್ನು ಸೌರಶಕ್ತಿಗೆ ಪರಿವರ್ತಿಸಬೇಕು ಮತ್ತು ನಾವು ವಿದ್ಯುತ್ ಚಲಾಯಿತ ವಾಹನಗಳನ್ನು ಸಾರ್ವಜನಿಕ ಸಾರಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಬೇಕು. ನಗರ ಪ್ರದೇಶದಲ್ಲಿ ಅರಣ್ಯ ಅಭಿವೃದ್ದಿಗೆ ಶ್ರಮಿಸಲು ಇದು ಒಳ್ಳೆಯ ಸಮಯ. ಮಹಾನಗರಪಾಲಿಕೆ ಎಲ್ಲಾ ರಸ್ತೆಗಳಲ್ಲಿ ಸೈಕ್ಲಿಂಗ್ ಪಥಗಳನ್ನು ಮತ್ತು ಪಾದಚಾರಿ ವಾಕಿಂಗ್ ಪಥಗಳನ್ನು ಸಹ ರಚಿಸಬೇಕು. ನಾಗರೀಕರು ಮೋಟಾರ್ ವಾಹನಗಳನ್ನು ಬಳಸುವುದನ್ನು ತಪ್ಪಿಸಲು ಮತ್ತು ಅದರ ಬದಲು ಸೈಕಲ್ ಬಳಸುವುದನ್ನು ಪ್ರೋತ್ಸಾಹಿಸಬೇಕು. ಮಂಗಳೂರಿನ ಜನರು ಅಭಿವೃದ್ಧಿ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಅವರು ಇಂತಹ ಪ್ರಯೋಗಗಳನ್ನು ಸಂತೋಷದಿಂದ ಸ್ವೀಕರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ,” ಎಂದು ಅವರು ಹೇಳಿದರು.
ಅವರು ಉಲ್ಲೇಖಿಸಿದ ಇನ್ನೊಂದು ದೃಷ್ಟಿಕೋನವೆಂದರೆ ‘ಯಂಗ್ ಅರ್ಥ್ಲಿಂಗ್ಸ್’ ಎಂಬ ಪರಿಕಲ್ಪನೆ. “ಯುವಕರು ಯಾವಾಗಲೂ ಆದರ್ಶವಾದಿಗಳಾಗಿರುತ್ತಾರೆ, ಪರಿಸರ ಸಮಸ್ಯೆಗಳ ಬಗ್ಗೆ ಬಹಳ ಧ್ವನಿ ಎತ್ತುತ್ತಾರೆ. ನಾವು ಮುಂದಿನ ಪೀಳಿಗೆಯನ್ನು ಒಳಗೊಳ್ಳಲು ಒಂದು ವೇದಿಕೆಯನ್ನು ಕಲ್ಪಿಸಬೇಕು. ನಾವು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ‘ಟೆಡ್-ಎಕ್ಸ್’ ನಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು,” ಎಂದು ಅವರು ಸಲಹೆ ನೀಡರು. ಪರಿಸರದ ನಿರ್ಲಕ್ಷ್ಯದ ಬೆಲೆ ವೈಯ್ಯಕ್ತಿಕವಾಗಿ ಮಾತ್ರ ಎಲ್ಲ, ಅದು ಸಮಾಜದ ಮೇಲೆ ಇನ್ನೂ ಹೆಚ್ಚಿರಬಹುದು ಎಂದು ಅವರು ಎಚ್ಚರಿಕೆಯ ಸಂದೇಶದೊAದಿಗೆ ಮುಕ್ತಾಯಗೊಳಿಸಿದರು.


“ಆರೋಗ್ಯವಿಲ್ಲದೆ ನಾವು ಏನನ್ನೂ ಮಾಡಲು ಅಸಾಧ್ಯ ಎಂದು ನಾವು ಕಷ್ಟವಾಗಿ ಕಲಿತಿದ್ದೇವೆ. ಆರೋಗ್ಯ ಮತ್ತು ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಎರಡರ ಮೇಲೂ ಪರಿಸರವು ಅತೀ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಪರಿಸರ, ಆರೋಗ್ಯ ಮತ್ತು ಆರ್ಥಿಕತೆಯು ನೇರವಾಗಿ ಪರಸ್ಪರ ಸಂಬಂಧ ಹೊಂದಿವೆ ಎಂಬುದು ಸಾಬೀತಾಗಿರುವ ಸತ್ಯ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮ ಮುಖ್ಯ ಆದ್ಯತೆಯಾಗಬೇಕು ಮತ್ತು ನಾವು ಈ ವಿಷಯದಲ್ಲಿ ಸಕ್ರಿಯರಾಗಬೇಕು,” ಎಂದು ಅವರು ಹೇಳಿದರು.
ಎಪಿಡಿ ಪ್ರತಿಷ್ಠಾನದ ಸಾಧನೆಗಳ ಬಗ್ಗೆ ಮಾತನಾಡುತ್ತ ರೆಹಮಾನ್, ತನ್ನ ಏಳು ವರ್ಷಗಳ ಅಸ್ತಿತ್ವದಲ್ಲಿ, ಪ್ರತಿಷ್ಠಾನವು ೨೫೦ ಇಂಟರ್ನ್ಗಳು ಮತ್ತು ೧೫೦೦ ಸ್ವಯಂಸೇವಕರಿಗೆ ತರಬೇತಿ ನೀಡಿದೆ. ಮಾಲಿನ್ಯ, ಘನ ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಮಾನವ ಘನತೆ ಮತ್ತು ಸಾಗರ ಪ್ಲಾಸ್ಟಿಕ್ ಅನ್ನು ತಗ್ಗಿಸುವ ವಿವಿಧ ಯೋಜನೆಗಳ ಮೂಲಕ ಸಾರ್ವಜನಿಕ ಚಟುವಟಿಕೆಗೆಗಳಿಗೆ ಕ್ರಮವಾಗಿ ಸುಮಾರು ರೂ. ೭೦ ಲಕ್ಷ ಮತ್ತು ರೂ. ೩ ಕೋಟಿ ನೇರ ಮತ್ತು ಪರೋಕ್ಷ ಹೂಡಿಕೆ ಲಭ್ಯವಾಗುವಂತೆ ಮಾಡಿಕೊಟ್ಟಿದೆ ಎಂದು ಹೇಳಿದರು.
ಎಪಿಡಿ ಪ್ರತಿಷ್ಠಾನ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಂಭಾಷಣೆ ಮತ್ತು ಚರ್ಚೆಯನ್ನು ಪ್ರಚೋದಿಸುವ ಪ್ರಯತ್ನದಲ್ಲಿ ೨೦೨೦ ರಲ್ಲಿ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮಗಳನ್ನು ಆರಂಭಿಸಿತು. ಸುಮಾರು ೩೦ ನಿಮಿಷಗಳ ಕಾಲ ನಡೆಯುವ ಆನ್‌ಲೈನ್ ಕಾರ್ಯಕ್ರಮಗಳನ್ನು ಪ್ರತಿ ವಾರ ಬೆಂಗಳೂರಿನ ಜನಪ್ರಿಯ ಕಾರ್ಯಕ್ರಮ ನಿರೂಪಕಿ ನಿವೇದಿತಾ ದೇವಾಡಿಗ ಆಯೋಜಿಸುತ್ತಿದ್ದಾರೆೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತು ಫೇಸ್‌ಬುಕ್‌ನಲ್ಲಿ ವೀಕ್ಷಿಸಬಹುದು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಕ್ಷಿ ಶ್ರೀದರ್, ಯುಎನ್-ಹ್ಯಾಬಿಟ್ಯಾಟ್‌ನ ತ್ಯಾಜ್ಯ ನಿರ್ವಹಣಾ ತಜ್ಞೆ ಸ್ವಾತಿ ಸಿಂಗ್ ಸಂಭ್ಯಾಲ್ ಮತ್ತು ಗೃಹ ಮಿಶ್ರಗೊಬ್ಬರ ಪ್ರವರ್ತಕಿ ವಾಣಿ ಮೂರ್ತಿ (ಜನಪ್ರಿಯವಾಗಿ ‘ವರ್ಮ ರಾಣಿ’) ಮುಂತಾದ ಪ್ರಮುಖ ವ್ಯಕ್ತಿಗಳು ಈ ಹಿಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು