ಬೆಳ್ತಂಗಡಿ : ೨೦೨೧-೨೨ ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಮಚ್ಚಿನ ಮೊರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಆಂಗ್ಲ ಶಾಲೆಯ ರೋಶನ್ ೬೨೫ರಲ್ಲಿ ೬೨೫ ಅಂಕ ಪಡೆದು ೧೦೦% ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿ ೬೨೫ಅಂಕ ಬರಬೇಕು ಎಂಬ ಕನಸು ಕಂಡು ಪ್ರಯತ್ನ ಪಡುತ್ತಿದ್ದೆ ಪ್ರತಿನಿತ್ಯ ಬೆಳಿಗ್ಗೆ ೫ಗಂಟೆಗೆ ಎದ್ದು ಓದುತ್ತಿದ್ದು ನಿರಂತರ ಶ್ರಮಪಡುತ್ತಿದ್ದೆ ಕಲಿಕೆಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡಿದ್ದು ಇದು ನನ್ನ ಸಾಧನೆಗೆ ಕಾರಣವಾಗಿದೆ. ಮುಂದೆ ವೈದ್ಯನಾಗಬೇಕು ಎಂಬ ಆಸೆ ಇದೆ.ಈತ ಮಚ್ಚಿನ ಗ್ರಾಮದ ಶಿವಪ್ಪ ಪೂಜಾರಿ,ಹರಿಣಾಕ್ಷಿ ದಂಪತಿ ಪುತ್ರ