ಬೆಳ್ತಂಗಡಿ; ಅಳದಂಗಡಿಯಲ್ಲಿ ಹೋಟೆಲ್ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಕಡಬ ಮೂಲದ ದಿನೇಶ್ ಶೆಟ್ಟಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಇವರು ಬೆಳ್ತಂಗಡಿಯ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಕೆಲ ಸಮಯದಿಂದ ಅಳದಂಗಡಿಯಲ್ಲಿ ಬಾರ್ ಒಂದರಲ್ಲಿ ಆಹಾರದ ವಿಭಾಗವನ್ನು ನಡೆಸುತ್ತಿದ್ದರು.
ಇವರು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಮನೆಯೊಳಗೆಯೇ ನೇಣು ಬಿಗಿದಿ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.