News Karnataka Kannada
Monday, May 20 2024
ಕರಾವಳಿ

ಮಂಗಳೂರು: ಬೆಸೆಂಟ್‌ ಹಳೆ ವಿದ್ಯಾರ್ಥಿ ಸಂಘದಿಂದ ಬೆಸೆಂಟ್ ಪ್ರೀಮಿಯರ್ ಲೀಗ್

Mangalore: Besant Premier League by Besant Alumni Association
Photo Credit :

ಮಂಗಳೂರು: ಬೆಸೆಂಟ್‌ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿದ ಬಿ.ಪಿ.ಎಲ್ ಪಂದ್ಯಾವಳಿಯು ನಗರದ ಪದುವಾ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಜರುಗಿತು . ಪಂದ್ಯಾವಳಿಯನ್ನು ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಣೀಲ್‌ಅಣ್ಣಪ್ಪ ನಾಯಕ್ ಆಡಳಿತ ಮಂಡಳಿಯ ಸದಸ್ಯರಾದ ಸತೀಶ ಕುಮಾರ ಭಟ್ ದೀಪ ಬೆಳಗಿಸಿ ಉದ್ಗಾಟಿಸಿ ಶುಭ ಹಾರೈಸಿದರು. ಬೆಸೆಂಟ್ ಸಂಧ್ಯಾ ಕಾಲೇಜು ಪ್ರಾಂಶುಪಾಲರಾದ ಡಾ. ಲಕ್ಷೀನಾರಾಯಣ ಭಟ್, ಸಂಘದ ಮಾಜಿ ಸಲಹೆಗಾರ ಗಣಪತಿ ಭಟ್ ಎಂ, ಡಾ. ವಾಸಪ್ಪಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ ದೀಪ್, ಕಾರ್ಯದರ್ಶಿ ಪ್ರಣವ್‌ಗಣೇಶ್. ಕ್ರೀಡಾ ಕಾರ್ಯದರ್ಶಿ ಮನೀಷ್, ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.‌

ಪಂದ್ಯಾವಳಿಯಲ್ಲಿ ೬ ತಂಡಗಳಾದ ಟೀಮ್ ವಿಕ್ಟರಿ, ಟೀಮ್ ಬ್ಲೂ ಸ್ಟಿಕ್, ಟೀಮ್‌ಡಾಮೀನೆಟ್, ಟೀಮ್ ಮಾಂಕ್,ಆರೇಜ್ ಆರ್ಮಿ ಮತ್ತು ಟೀಮ್ ಮಾನ್ಸ್‌ ಕ್ರಿಕೆಟರ್ಸ್ ಕ್ರೀಡಾಕೂಟಾದಲ್ಲಿ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಹಾಗೂ ಸರಣಿ ಶ್ರೇಷ್ಠ ಕ್ರೀಡಾ ಪಟುಗಳಿಗೆ ಆಕರ್ಷಕ ಬಹುಮಾನಗಳನ್ನು‌ ನೀಡಲಾಯಿತು . ದಿನವಿಡೀ ನಡೆದ ಲೀಗ್ ಸ್ಪರ್ಧೆಯಲ್ಲಿ ಲೋಹಿತ್ ಬಜಲ್ ಮಾಲಕತ್ವದ ಆರೇಜ್ ಆರ್ಮಿ ತಂಡವು ಜಯಶಾಲಿಯಾಗಿ ಟ್ರೋಫಿಯನ್ನು ತನ್ನದಾಗಾಸಿಕೊಂಡಿತು. ಗೌರವ್ ಮೊಹ್ಲಿ ಮಾಲಕತ್ವದ ಟೀಮ್ ವಿಕ್ಟರಿ ತಂಡವು ರನ್ನರ ಆಪ್ ಪ್ರಶಸ್ತಿ ಪಡೆದುಕೊಂಡಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ಉದಯ್ ಆಚಾರ್ ಕಾಲೇಜು ಪ್ರಾಂಶುಪಾಲರಾದ ಡಾ. ಲಕ್ಷೀನಾರಾಯಣ ಭಟ್ ಹಾಗೂ ಎಸ್.ಡಿ.ಎಂ ನ ಉಪನ್ಯಾಸಕರಾದ ಪ್ರವೀಣ ದೆಂಗೋಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಮದುರಾಜ್ ಅವರು ಸರಣಿ ಶ್ರೇಷ್ಠ, ಅಂಬತನಯ ಶ್ರೇಷ್ಠ ದಾಂಡಿಗನಾಗಿ ಹಾಗೂ ಸುನೀಲ್ ಶ್ರೇಷ್ಠ ಎಸೆತಗಾರನಾಗಿ ಪ್ರಶಸ್ತಿ ಪಡೆದರು. ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಚ್ಷರಾದ ಪ್ರದೀಪ್ ವಂದಿಸಿದರು ಹಾಗೂ ಪ್ರತೀಶ್ ಗೌರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು