ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಪಾತೂರಿನಲ್ಲಿ ನಡೆದಿದೆ. ಪಾತೂರು ಬದಿಮೂಲೆಯ ಕೆ. ಹಸನ್ ಕುಂಞರವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಕಳವು ನಡೆಸಲಾಗಿದೆ.
ಕುಟುಂಬ ದವರು ಸಮೀಪದ ಬಾಕ್ರ ಬೈಲ್ ನಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆಸಲಾಗಿದೆ. ರಾತ್ರಿ ಮನೆಗೆ ಬಂದಾಗ ಅಡುಗೆ ಕೋಣೆಯ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಗಮನಿಸಿದಾಗ ಕೋಣೆಯಲ್ಲಿದ್ದ ಕಪಾಟು ಮುರಿದು ಕಳ್ಳತನ ನಡೆಸಿರುವುದು ಕಂಡು ಬಂದಿದೆ . ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.