ಬೆಂಗಳೂರು: ವಾರಾಂತ್ಯದಲ್ಲಿ ತುಸು ಇಳಿಕೆ ಆಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈಗ ಏರಿಕೆಯಾಗತೊಡಗಿವೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಹೆಚ್ಚಾದರೆ, ಬೆಳ್ಳಿ ಬೆಲೆ ಗ್ರಾಮ್ಗೆ 30 ಪೈಸೆಯಷ್ಟು ದುಬಾರಿಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,400 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,620 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,800 ರೂಪಾಯಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 57,400 ರೂ, ಚೆನ್ನೈ: 57,850 ರೂ, ಮುಂಬೈ: 57,400 ರೂ, ದೆಹಲಿ: 57,550 ರೂ, ಕೋಲ್ಕತಾ: 57,400 ರೂ, ಕೇರಳ: 57,400 ರೂ, ಅಹ್ಮದಾಬಾದ್: 57,450 ರೂ, ಜೈಪುರ್: 57,550 ರೂ, ಲಕ್ನೋ: 57,550 ರೂ, ಭುವನೇಶ್ವರ್: 57,400 ರೂ ಆಗಿದೆ.
ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.