ಕಾಸರಗೋಡು : ಎಂ ಡಿ ಎಂ ಎ ಮಾದಕ ವಸ್ತು ಸಹಿತ ಮಂಜೇಶ್ವರ ನಿವಾಸಿ ಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಕುಂಜತ್ತೂರಿನ ಎ ಸಮೀರ್ (45) ಬಂಧಿತ ಆರೋಪಿ. ಈತನಿಂದ 40 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ತೆರಳು ತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪುತ್ತೂರಿನಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.