News Karnataka Kannada
Monday, April 29 2024
ಕಾಸರಗೋಡು

ಕಾಸರಗೋಡು: ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

Gadinada Rajyotsava Awards Ceremony
Photo Credit : By Author

ಕಾಸರಗೋಡು: ಗಡಿನಾಡು ಕಾಸರಗೋಡಿನ ಬಹುಭಾಷಾ ಸಂಸ್ಕೃತಿ  ದೇಶಕ್ಕೆ ಮಾದರಿಯಾಗಿರುವುದಾಗಿ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.

ಅವರು ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ  ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಭಾನುವರ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ-2022, ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾಸರಗೋಡಿನಲ್ಲಿ ಕನ್ನಡ ಮತ್ತು ಮಲಯಾಳಿಗರು ಒಂದೇ ತಾಯಿಯ ಮಕ್ಕಳಂತೆ ಬದುಕು ಸಾಗಿಸುತ್ತಿದ್ದಾರೆ. ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ಸಂರಕ್ಷಣೆಗೆ ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿ ನೆರವಾಗಬೇಕು ಎಂದು ತಿಳಿಸಿದರು.

ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಕಾಸರಗೋಡು ಜಿಲ್ಲಾ ಘಟಕ ಸಂಸ್ಥಾಪಕ ಪ್ರದೀಪ್ ಕುಮಾರ್ ಕಲ್ಕುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಹೆಸರಲ್ಲಿ ದುರಭಿಮಾನದ ಹೋರಾಟ ಬೇಕಾಗಿಲ್ಲ. ಇನ್ನೊಂದು ಭಾಷೆಗೆ ಮಸಿ ಬಳಿಯುವ ಕೆಲಸದಿಂದ ಸಮಸ್ಯೆಗಳಿಗೆ ಸೌಹಾರ್ದ ಪರಿಹಾರ ಕಂಡುಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಕಾಸರಗೋಡಿನಲ್ಲಿ ಭಾಷಾ ಭೇದವಿಲ್ಲದೆ ಬಾಂಧವ್ಯ ಬೆಳೆದು ಬಂದಿದೆ.  ಕನ್ನಡದ ಕಾರ್ಯಕ್ರಮಗಳಲ್ಲಿ ಇಲ್ಲಿನ ಜನಪ್ರತಿನಿಧಿಗಳ ನಿರಂತರ ಉಪಸ್ಥಿತಿ ಸಮಾರಂಭಗಳಿಗೆ ಹೆಚ್ಚಿನ ಮರಗು ತಂದುಕೊಡುತ್ತಿರುವುದಾಗಿ ಶ್ಲಾಘಿಸಿದರು.

ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕನ್ನಡದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಎತ್ತುವ ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮಾಣಿಕ ಪ್ರಯತ್ನ ಮುಂದುವರಿಯಲಿದೆ. ಜಿಲ್ಲೆಯ ಶಾಲಾ ಕಲೋತ್ಸವದ ಸ್ಪರ್ಧೆಗಳಲ್ಲಿ ಕನ್ನಡ ಮಾಧ್ಯಮ ಸ್ಪರ್ಧಾಳುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿರುವುದು ಖಂಡನೀಯ. ಈ ಬಗ್ಗೆ ಸಾರ್ವನಿಕ ಶಿಕ್ಷಣ ನಿರ್ದೇಶಕರ ಜತೆ ಮಾತನಾಡಿ, ಸಮಸ್ಯೆಗೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.

ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಮಾತನಾಡಿ,  ಸರ್ಕಾರಕ್ಕೆ ಒತ್ತಡ ಹೇರುವ ಮೂಲಕ ಕಾಸರಗೋಡಿನ ಕನ್ನಡದ ಕಟ್ಟಾಳು, ಮೇರು ಸಾಹಿತಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ಪೆರಡಾಲದಲ್ಲಿ ನಿರ್ಮಾಣವಾಗಲಿರುವ ಸ್ಮಾರಕಕ್ಕೆ 40ಲಕ್ಷ ರೂ.  ಮಂಜೂರುಗೊಂಡಿದ್ದು, ಸ್ಮಾರಕ ಕೆಲಸ ಶೀಘ್ರ ಆರಂಭಗೊಳ್ಳಲಿದೆ. ಇದರಿಂದ ಕನ್ನಡಪರ ಚಟುವಟಿಕೆ ಮತ್ತಷ್ಟು ಬಲಪಡೆದುಕೊಳ್ಳಲು ಸಾಧ್ಯ.ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ವಿಧಾನಸಭೆಯಲ್ಲಿ ನಿರಂತರ ಹೋರಾಟ ನಡೆಸಲು ಬದ್ಧನಾಗಿರುವುದಾಗಿ ತಿಳಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.

ಉದುಮ ಶಾಸಕ ಸಿ.ಎಚ್. ಕುಞಂಬು, ಮಂಗಳೂರು ಕೆನರಾ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಪ್ರೊ. ವಾಣಿ ಯು.ಎಸ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಸಂಚಾಲಕ ಎ.ಆರ್ ಸುಬ್ಬಯ್ಯಕಟ್ಟೆ, ಜಯರಾಮ ಪಾಟಾಳಿ ಪಡುಮಲೆ ಉಪಸ್ಥಿತರಿದ್ದರು.

ಈ ಸಂದರ್ಭ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರನ್ನು ಗೌರವಿಸಲಾಯಿತು. ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘ-ಸಂಸ್ಥೆಯಲ್ಲಿ ಸೋಮೇಶ್ವರ ಕೋಟೆಕ್ಕಾರ್ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್‍ಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಜಸ್ಟಿಸ್ ಕೆ.ಎಲ್ ಮಂಜುನಾಥ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ(ಯಕ್ಷಗಾನ), ಡಾ. ಅರತಿ ಕೃಷ್ಣ(ಸಮಾಜಸೇವೆ), ನಂದಳಿಕೆ ನಾರಾಯಣ ಶೆಟ್ಟಿ(ಸಾಹಿತ್ಯ), ಕಾಸರಗೋಡು ಜನರಲ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜನಾರ್ದನ ನಾಯ್ಕ್(ವೈದ್ಯಕೀಯ), ವಕೀಲ ಮಹಮ್ಮದ್ ಅಸ್ಗರ್(ಕನ್ನಡ ಸೇವೆ), ಗಂಗಾಧರ ಆಳ್ವ ಪೆರಡಾಲ(ಕೃಷಿ), ವಸಂತ ಆಳ್ವ ತಲೆಕಳ(ಪರಿಸರ ಸಂರಕ್ಷಣೆ)ಅವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಅಕಾಡಮಿ ಜಿಲ್ಲಾ ಘಟಕ  ಅಧ್ಯಕ್ಷ ಚನಿಯಪ್ಪ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೇಖಕ, ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ  ಝಡ್ .ಎ ಕಯ್ಯಾರ್ ವಂದಿಸಿದರು. ಪ್ರತಿಭಾನ್ವಿತರಿಗೆ ಅಭಿನಂದನೆ, ಸನ್ಮಾನಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ, ತಿರುವಾದಿರ ನೃತ್ಯ, ಜಾನಪದ ನೃತ್ಯ, ಮಂಗಳೂರು ಕೆನರಾ ಕಾಲೇಜು ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು