ಕಾಸರಗೋಡು : ಕಾರಿನಲ್ಲಿ ಸಾಗಾಟ ಮಾಡಲಾಗು ತ್ತಿದ್ದ ಸುಮಾರು 128 ಕಿಲೋ ಗಾಂಜಾ ವನ್ನು ಆದೂರು ಪೊಲೀಸರು ಮತ್ತು ನಾರ್ಕೋಟಿಕ್ ತಂಡ ವಶ ಪಡಿಸಿ ಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ.
ಕಾಸರಗೋಡು ವಿದ್ಯಾನಗರದ ಝುಬೈರ್ ಬಂಧಿತ . ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ತಂಡವು ಆದೂರು ಸಮೀಪದಿಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪ್ಯಾಕೆಟ್ ಗಳಾ ಗಿ ಗಾಂಜಾ ವನ್ನು ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು.
ಆಂಧ್ರ ಪ್ರದೇಶ ದಿಂದ ತಲಪಿದ ಗಾಂಜಾ ವು ಕಾಸರಗೋಡಿನ ವಿವಿಧೆಡೆಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎನ್ನಲಾಗಿದೆ.
ಗುರುವಾರ ಸಂಜೆ ಮಂಗಳೂರು ಮೂಲಕ ಕಾಸರಗೋಡಿಗೆ ತರಲಾ ಗುತ್ತಿದ್ದ 114 ಕಿಲೋ ಗಾಂಜಾ ವ ನ್ನುಅಬಕಾರಿ ದಳದ ಸಿಬ್ಬಂದಿಗಳು ವಶ ಪಡಿಸಿ ಕೊಂಡು ಓರ್ವ ನನ್ನು ಬಂಧಿಸಿದ್ದರು.
ಗಾಂಜಾ ವನ್ನು ಆಂಧ್ರ ಪ್ರದೇಶ ದಿಂದ ತರಲಾಗುತ್ತಿತ್ತು .ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಟ್ಟಂಗುಯಿಯ ಅಜ್ಮಲ್ ಎಂಬಾತ ನನ್ನು ಬಂಧಿಸಲಾಗಿತ್ತು