News Karnataka Kannada
Friday, May 03 2024
ಕಾಸರಗೋಡು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 312 ಮಂದಿಗೆ ಕೋವಿಡ್ ಪಾಸಿಟಿವ್

Ita Covid19 Mng 06082021
Photo Credit :

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 312 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 300 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 275 ಮಂದಿ ಸೋಂಕುಮುಕ್ತರಾದರು. ಈ ಮಧ್ಯೆ ಜಿಲ್ಲೆಯಲ್ಲಿ ಕೊರೋನಾ ಬಾಧಿಸಿ ಬುಧವಾರ ಒಂದು ಸಾವು ಸಂಭವಿಸಿದ್ದು , ಅದರಂತೆ ಒಟ್ಟು ಸಾವಿನ ಸಂಖ್ಯೆ 514 ಕ್ಕೇರಿದೆ.

ಇದೇ ವೇಳೆ ಕೇರಳದಲ್ಲಿ ಹೊಸದಾಗಿ 19,675 ಜನರಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಇದರಲ್ಲಿ 18,924 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ರಾಜ್ಯದಲ್ಲಿ 19,702 ಜನರು ಗುಣಮುಖರಾದರು.

ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 2792, ತಿರುವನಂತಪುರ 2313, ತೃಶೂರು 2266, ಕಲ್ಲಿಕೋಟೆ 1753, ಕೋಟ್ಟಾಯಂ 1682, ಮಲಪ್ಪುರಂ 1298, ಆಲಪ್ಪುಳ 1256, ಕೊಲ್ಲಂ 1225, ಪಾಲಕ್ಕಾಡು 1135, ಪತ್ತನಂತ್ತಿಟ್ಟ 1011, ಕಣ್ಣೂರು 967, ಇಡುಕ್ಕಿ 927, ವಯನಾಡು 738, ಕಾಸರಗೋಡು ಜಿಲ್ಲೆಯಲ್ಲಿ 312 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಕೇರಳದಲ್ಲಿ ಕೋವಿಡ್ ವೈರಸ್ ಬಾಧಿಸಿ ಬುಧವಾರ 142 ಜನರು ಅಸುನೀಗಿದ್ದು , ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 24,039 ಜನರು ಮರಣ ಹೊಂದಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು