News Karnataka Kannada
Thursday, May 09 2024
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ 500ರ ಗಡಿ ದಾಟಿದ ಸೋಂಕು: ಸೋಮವಾರ 574 ಮಂದಿಗೆ ಕೊರೋನಾ ಪಾಸಿಟಿವ್

covid case increased
Photo Credit :

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ ಸೋಮವಾರ 500ರ ಗಡಿ ದಾಟಿದೆ. ಅದರಂತೆ 574 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆಯಾಗಿದೆ.

ಈ ಪೈಕಿ 522 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಇದೇ ದಿನ 98 ಮಂದಿ ಗುಣಮುಖರಾದರು. ಅಲ್ಲದೆ ಕೊರೋನಾ ಸಂಬಂಧ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಸಾವು ಸಂಭವಿಸಿಲ್ಲ.

ಕೇರಳದಲ್ಲಿ 22,946 ಹೊಸ ಪ್ರಕರಣ
ಕೇರಳ ವ್ಯಾಪಕವಾಗಿಯೂ ಸೋಂಕು ಹರಡುತ್ತಿದ್ದು , ಸೋಮವಾರ ಹೊಸದಾಗಿ 22,946 ಜನರಲ್ಲಿ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 22,179 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ರಾಜ್ಯದಲ್ಲಿ ಒಂದೇ ದಿನ 5280 ಜನರು ಗುಣಮುಖರಾಗಿದ್ದಾರೆ. ಈ ಮಧ್ಯೆ ಕೇರಳದಲ್ಲಿ 18 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಮವಾರ ಶೇಕಡಾ 33.07 ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ದಾಖಲಾಗಿದೆ. ಭಾನುವಾರ ಶೇಕಡಾ 30.55 ಟಿಪಿಆರ್ ದಾಖಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು