News Karnataka Kannada
Monday, May 20 2024
ಮನರಂಜನೆ

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

Jythi
Photo Credit : NewsKarnataka

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ ವಿಡಿಯೋ ಲೀಕ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಜ್ಯೋತಿ ರೈ ಅವರದ್ದೇ ಎನ್ನುವ ಫೋಟೋಗಳು ಮತ್ತು ವಿಡಿಯೋಗಳು ವಾಟ್ಸಾಪ್‌ನಲ್ಲಿ ಸಂಚಲನ ಸೃಷ್ಟಿಸಿವೆ. ಈಗಾಗಲೇ ಕರ್ನಾಟಕದಲ್ಲಿ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ ಚಾಲ್ತಿಯಲ್ಲಿರುವಾಗಲೇ ಜ್ಯೋತಿ ರೈ ಖಾಸಗಿ ವಿಡಿಯೋಗಳು ಲೀಕ್‌ ಆಗಿದ್ದು ಚರ್ಚೆಗೆ ಕಾರಣವಾಗಿವೆ. ಎಡಿಟ್ ಬೈ ಅಭಿ ಎನ್ನುವ ಎಕ್ಸ್ ಖಾತೆಯಲ್ಲಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಬರೆದುಕೊಂಡಿದ್ದಾನೆ.

ಸೋಷಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಅವರದ್ದೇ ಎನ್ನಲಾದ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿವೆಯಾದರೂ, ಈ ಬಗ್ಗೆ ನಟಿ ತುಟಿ ಬಿಚ್ಚಿಲ್ಲ. ವಿಡಿಯೋ ಲೀಕ್‌ ಬಳಿಕ ತಮ್ಮದೇ ಇನ್‌ಸ್ಟಾಗ್ರಾಂನಲ್ಲಿ ಎರಡನೇ ಪತಿ ಸುಕು ಪೂರ್ವಜ್‌ ಜತೆಗಿನ ಫೋಟೋ ಶೇರ್‌ ಮಾಡಿ ಹಾರ್ಟ್‌ ಎಮೋಜಿ ಹಾಕಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. ಬಹಿರಂಗವಾಗಿಯೂ ಎಲ್ಲಿಯೂ ಈ ಘಟನೆಯ ಬಗ್ಗೆ ಅವರು ಮಾತನಾಡಿಲ್ಲ.

ಆದರೆ ಕಳೆದ ಕೆಲ ದಿನಗಳ ಹಿಂದೆಯೇ, ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದ ಜ್ಯೋತಿ ರೈ, “ನನಗೆ ಕೆಲವೊಂದು ಸಂದೇಶಗಳು ಮಾನಸಿಕ ಆಘಾತವನ್ನುಂಟು ಮಾಡಿವೆ. ನನ್ನನ್ನು ಮತ್ತು ನನ್ನ ಕುಟುಂಬದ ಗೌರವ, ಪ್ರತಿಷ್ಠೆಯನ್ನು ಹಾಳು ಮಾಡುವ ಉದ್ದೇಶಕ್ಕೆ ಈ ರೀತಿಯ ಕೃತ್ಯ ಎಸಗುತ್ತಿದ್ದಾರೆ. ಇವರಿಂದ ನನ್ನ ಕುಟುಂಬ ಅಪಾಯದಲ್ಲಿದೆ. ಹಾಗಾಗಿ ಇಂಥವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಅವರಿಂದ ನಾನು ದೊಡ್ಡ ಪ್ರಮಾಣದಲ್ಲಿ ಮಾನಹಾನಿ ಆಗಲಿದೆ. ಈ ದೂರಿನ ಮೂಲಕ ಸಂಬಂಧಪಟ್ಟ ಐಡಿಗಳನ್ನು ನಾನು ನಿಮಗೆ ನೀಡುತ್ತಿದ್ದೇನೆ” ಎಂದಿದ್ದರು.

ಸದಾ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ಜ್ಯೋತಿ ರೈ… ಆಗಾಗ್ಗೆ ಹಾಟ್ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿಸುತ್ತಿರುತ್ತಾರೆ. ಆದರೆ, ಈ ಬಾರಿ ಅವರು ಅಶ್ಲೀಲ ವಿಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ಚೆಲ್ ಎಬ್ಬಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು