News Karnataka Kannada
Tuesday, May 07 2024
ಕರಾವಳಿ

ಶಾಲಾ ಪಠ್ಯ ಬದಲಿಸುವುದು ಖಂಡನೀಯ: ಕಾಗೇರಿ ಕಿಡಿ

Kageri press meet
Photo Credit : News Kannada

ಕಾರವಾರ:ಎಡ ಪಂಥೀಯರನ್ನು ಓಲೈಸುವ ಸಲುವಾಗಿ ರಾಜ್ಯ ಸರ್ಕಾರ ಈಗ ಶಾಲಾ ಪಠ್ಯ ಬದಲಿಸಲು ಹೊರಟಿರುವದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಶಿರಸಿಯಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಲಾಮಿತನದ ಮಾನಸಿಕತೆಯನ್ನು ಮಕ್ಕಳ ಮೇಲೆ ಹೇರಲು ಯಾವ ಕಾರಣಕ್ಕೂ ಮುಂದಾಗಬಾರದೆಂದು ಶಿರಸಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಸಮಧಾನ ಹೊರಹಾಕಿದ ಅವರು, ಈಗಾಗಲೇ ಶಾಲೆಗಳಿಗೆ ಪುಸ್ತಕ ವಿತರಣೆ ಆಗಿದೆ. ಶಾಲೆಗಳು ಆರಂಭಗೊಂಡಿವೆ. ಅನಗತ್ಯವಾಗಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ. ದೇಶದ ನೈಜ ಸ್ಥಿತಿ ತಿಳಿಸುವ ಪಠ್ಯಗಳನ್ನು ತೆಗೆಯಲು ಕಾಂಗ್ರೆಸ್ ಯೋಚಿಸುತ್ತಿದೆ. ಸಿದ್ದರಾಮಯ್ಯ ಎಡ ಪಂಥೀಯ ವಿಚಾರ ಧಾರೆಯ ಕೈಗೊಂಬೆ ಆಗಿ ವರ್ತಿಸುತ್ತಿದ್ದಾರೆ. ಇದರ ಪರಿಣಾಮ ಪಠ್ಯ ಬದಲಾವಣೆಯ ತರಾತುರಿ ಕಾಣಿಸುತ್ತಿದೆ.

ಈಗ ಶೈಕ್ಷಣಿಕ ವರ್ಷ ಆರಂಭ ಆಗಿ ಪುಸ್ತಕ ಪೂರೈಕೆ ಆದ ಮೇಲೆ ವಿದ್ಯಾರ್ಥಿಗಳಿಗೆ ಗೊಂದಲ ಮಾಡಬೇಡಿ. ಎಡಪಂಥೀಯರ ಓಲೈಕೆಗೆ ಶಿಕ್ಷಣ ಕ್ಷೇತ್ರಕ್ಕೆ ತೊಂದರೆ ಮಾಡಬೇಡಿ ಎಂದರು. ಪಠ್ಯ ಬದಲಾವಣೆಗೂ ಇತಿ ಮಿತಿಗಳಿವೆ. ವಿವಿಧ ಹಂತದ ಚರ್ಚೆ ನಡೆದು ಬದಲಾವಣೆ ಮಾಡುವ ಪದ್ಧತಿ ಇದೆ. ಈ ಹಿಂದೆ 2013ರಲ್ಲಿ ಸಹ ಸಿದ್ದರಾಮಯ್ಯ ಇದೇ ರೀತಿ ವರ್ತಿಸಿ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರಾಷ್ಟ್ರೀಯತೆ ವಿಚಾರ ಬದಿಗಿಟ್ಠು ಪಠ್ಯ ರಚನೆಗೆ ಮುಂದಾಗಿತ್ತು. ಪಠ್ಯದಲ್ಲಿ ತಪ್ಪಿಲ್ಲದಿದ್ದರೂ ಕೆಲವರು ಬರೆದಿದ್ದಾರೆ ಎಂಬ ಕಾರಣಕ್ಕೆ ಬದಲಾಗಿಸುತ್ತಿದ್ದಾರೆ. ಇತಿಹಾಸಕ್ಕೆ ಹತ್ತಾರು ಮುಖಗಳಿವೆ.

ಭಾರತೀಯ ದೃಷ್ಟಿಕೋನದ ಇತಿಹಾಸವನ್ನು ನಾವು ಮಕ್ಕಳಿಗೆ ನೀಡಬೇಕೇ ಹೊರತೂ ಬ್ರಿಟೀಷರ ಅಥವಾ ಮುಘಲರ ದೃಷ್ಟಿಕೋನದಿಂದ ಮಕ್ಕಳಿಗೆ ನೀಡಬಾರದು. ಗುಲಾಮಿತನದ ಮಾನಸಿಕತೆಯ ಶಿಕ್ಷಣಕ್ಕೆ ಮತ್ತೆ ಸಿದ್ರಾಮಯ್ಯ ಮುಂದಾಗಿದ್ದಾರೆ. ಈ ರೀತಿ ಗೊಂದಲ ಮಾಡಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಎಡಪಂಥೀಯರ ಓಲೈಕೆಗೆ ಮಾಡುತ್ತಿರುವ ಯತ್ನ ಖಂಡನಾರ್ಹ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು