News Karnataka Kannada
Sunday, May 19 2024
ಕರಾವಳಿ

ಮದುವೆ ಮಂಟಪದಂತೆ ಕಂಗೋಳಿಸುತ್ತಿರುವ ಬೆಳ್ತಂಗಡಿಯ ನೆರಿಯ ಮತಗಟ್ಟೆ

Photo Credit :

ಮದುವೆ ಮಂಟಪದಂತೆ ಕಂಗೋಳಿಸುತ್ತಿರುವ ಬೆಳ್ತಂಗಡಿಯ ನೆರಿಯ ಮತಗಟ್ಟೆ

ಬೆಳ್ತಂಗಡಿ: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಬೆಳ್ತಂಗಡಿಯಲ್ಲಿನ ನೆರಿಯದಲ್ಲಿ ಮತದಾರಗಟ್ಟೆ ಹಲವು ವಿಶೇಷತೆಗಳಿಂದ ಜನರನ್ನು ಆಕರ್ಷಿಸುತ್ತಿದೆ.

ತಾಲ್ಲೂಕಿನ 84ನೇ ಸಂಖ್ಯೆಯ ಮತಗಟ್ಟೆಯಾಗಿರುವ ನೆರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ವಿಶೇಷ ಮತಗಟ್ಟೆ ಎಂದು ಪರಿಗಣಿಸಲಾಗಿದ್ದು, ಈಗಾಗಲೇ ಮದುವೆ ಮಂಟಪ ಮಾದರಿಯಲ್ಲಿ ಶಾಲೆಯನ್ನು ಅಲಂಕಾರ ಮಾಡಲಾಗಿದೆ.

ಮುಖ್ಯದ್ವಾರದಲ್ಲಿ ಮತದಾನ ಹಬ್ಬ: 2018 ಎಂದು ನಮೂದಿಸಿ, ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕಿ ನೆರಿಯ ಮತಗಟ್ಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ಬರೆಯಲಾಗಿದೆ.

ಕರಾವಳಿಯ ಶೈಲಿಯಲ್ಲಿ ಶಾಲೆಯನ್ನು ಶೃಂಗಾರಿಸಿ ಶಾಲೆ ಸುತ್ತ ತೋರಣವನ್ನು ಕಟ್ಟಲಾಗಿದೆ.

ಶಾಲೆಯ ಮುಂಬಾಗದಲ್ಲಿ ಮತದಾರರಿಗೆ ಅದ್ಧೂರಿಯಾಗಿ ಸ್ವಾಗತವನ್ನು ಕೋರಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಹೊಸ ಮತದಾರರನ್ನು ಮತ್ತಷ್ಟು ಆಕರ್ಷಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು