News Karnataka Kannada
Sunday, May 12 2024
ಕರಾವಳಿ

ನಗರಸಭೆ ಸರಹದ್ದಿನ ಫಲಕಗಳಲ್ಲಿ ಪುರಸಭೆಯ ಸ್ವಾಗತ…!

Photo Credit :

ನಗರಸಭೆ ಸರಹದ್ದಿನ ಫಲಕಗಳಲ್ಲಿ ಪುರಸಭೆಯ ಸ್ವಾಗತ...!

ಪುತ್ತೂರು: ಪುರಸಭೆ ನಗರಸಭೆಯಾಗಿ ಬದಲಾಗಿದೆ. ಅದಕ್ಕೆ ತಕ್ಕ ಹಾಗೆ ಕಡತ, ಕಚೇರಿ ಫಲಕಗಳಲ್ಲಿ ಪುರಸಭೆ ಬದಲು ನಗರಸಭೆ ಎಂದಾಗಿದೆ. ಆದರೆ ಬಾಹ್ಯ ಪ್ರಪಂಚಕ್ಕೆ ಕಾಣುವ ಮುಖ್ಯ ರಸ್ತೆಗಳ ಬದಿಗಳ ಸರಹದ್ದಿನ ಫಲಕಗಳಲ್ಲಿ ಈಗಲೂ ನಗರದೊಳಗೆ ಪುರಸಭೆ ಸ್ವಾಗತ ಕೋರುತ್ತಿದೆ..!

ಹನ್ನೊಂದು ತಿಂಗಳು
1973 ರಲ್ಲಿ ಪುತ್ತೂರು ಪಟ್ಟಣ ಪಂಚಾಯಿತ್ ಪುರಸಭೆಯಾಗಿ ಮೇಲ್ದೆರ್ಜೆಗೇರಿತ್ತು. ಆ ಬಳಿಕ 42 ವರ್ಷಗಳ ಅನಂತರ 2015 ಜ.22 ರಂದು ನಗರಸಭೆ ಆಗಿ ಬದಲಾಯಿತು. ಈ ಪ್ರಕ್ರಿಯೆ ಆಗಿ ಬರೋಬ್ಬರಿ 11 ತಿಂಗಳು ಪೂರ್ಣಗೊಂಡಿದೆ. ಆದರೆ ನಗರಸಭೆಯ ಗಡಿಭಾಗದಲ್ಲಿ ಗುರುತಿಗಾಗಿ ಅಳವಡಿಸಿರುವ ಫಲಕಗಳು ಈಗಲೂ ಪುರಸಭೆಯ ಹೆಸರಿನಲ್ಲಿದೆ. ಹಾಗಾಗಿ ಹೊರ ಪ್ರದೇಶದಿಂದ ಪುತ್ತೂರಿಗೆ ಬರುವವರಿಗೆ ಇದೂ ನಗರಸಭೆ ಎಂಬ ಭಾವನೆ ಮೂಡಲಾರದು.

ಎಲ್ಲೆಲ್ಲಿ ಈ ಸಮಸ್ಯೆ..!
ಮುಖ್ಯವಾಗಿ ಕಬಕ ಪುತ್ತೂರು ಸಂಪರ್ಕ ರಸ್ತೆಯ ಮುರ, ಕುಂಬ್ರ-ಪುತ್ತೂರು ಸಂಪರ್ಕ ರಸ್ತೆಯ ಸಂಪ್ಯದಲ್ಲಿ ಎರಡು ಮೆಗಾ ಕಮಾನು ಬೋರ್ಡ್ ಗಳಿವೆ. ಅದರಲ್ಲೂ ಪುರಸಭೆಗೆ ಸ್ವಾಗತ ಎಂದಿದೆ. ಸವಣೂರು-ದರ್ಬೆ ರಸ್ತೆಯ ಬೆದ್ರಾಳ, ಪಾಣಾಜೆ-ಪುತ್ತೂರು ರಸ್ತೆಯ ಪರ್ಲಡ್ಕ ಸಮೀಪ ಕಾಂಕ್ರೀಟ್ ಗಡಿ ಬೋರ್ಡ್ ನಲ್ಲಿ ಪುರಸಭೆಗೆ ಸುಸ್ವಾಗತ, ಪುರಸಭೆ, ಸರಹದ್ದು ಎಂಬ ಹೆಸರು ಇನ್ನು ಬದಲಾಗಿಲ್ಲ. ಹಾಗಾಗಿ ಪುತ್ತೂರು ನಗರ ನಿವಾಸಿಗಳಿಗೆ, ನಗರಸಭೆ ಕಚೇರಿಗೆ ಮಾತ್ರ ಪುರಸಭೆ ನಗರಸಭೆ ಆಗಿದೆ ಎಂಬ ಸ್ಪಷ್ಟ ಮಾಹಿತಿ ಇದೆ ಹೊರತು, ಹೊರಗಿನ ಮಂದಿಗೆ ಈ ಬೋರ್ಡ್ ತಪ್ಪು ಮಾಹಿತಿ ನೀಡುತ್ತದೆ.

ಹೆಸರಿಗೆ ಮಾತ್ರ ನಗರಸಭೆ..!
ಸಾಮಾನ್ಯಸಭೆಗಳಲ್ಲಿ ಅಧಿಕಾರಿಗಳಿಗೆ, ಜನಪ್ರತಿನಿಗಳು ನಗರಸಭೆ ಬದಲಾಗಿ ಪುರಸಭೆ ಎಂದೂ ಹೇಳುವ ಅನೇಕ ಸಂದರ್ಭಗಳು ಬಂದಿವೆ. ಅದರ ಜತೆಗೆ ಪುರಸಭೆಯಾಗಿ ವರ್ಷ ಕಳೆದರೂ, ಅದಕ್ಕೆ ತಕ್ಕ ಸೌಲಭ್ಯಗಳು ಇನ್ನೂ ಬಂದಿಲ್ಲ. ಒಂದರ್ಥದಲ್ಲಿ ಹೆಸರಿಗೆ ಮಾತ್ರ ನಗರಸಭೆ. ವ್ಯವಸ್ಥೆ ಈಗಲೂ ಪುರಸಭೆಯದ್ದೆ. ಹಾಗಾಗಿ ಗಡಿ ಭಾಗದಲ್ಲಿನ ಫಲಕದಲ್ಲಿ ಇರುವ ಫಲಕ ಪುರಸಭೆ ಎಂಬ ಹೆಸರು ಅಪಾರ್ಥ ಅಲ್ಲ ಎಂದೂ ಕೆಲವರೂ ತಮ್ಮದೇ ದಾಟಿಯಲ್ಲಿ ವಿಮರ್ಶಿಸುವುದೂ ಉಂಟು..!

ಈ ತಿಂಗಳಲ್ಲಿ ಪೂರ್ಣ
ಈ ವಿಚಾರ ನಮ್ಮ ಗಮನದಲ್ಲಿ ಇದೆ. ಅದರ ಬದಲಾವಣೆ ಕುರಿತು ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ. ಈ ತಿಂಗಳಲ್ಲಿನಲ್ಲಿಯೇ ಅಂದಾಜು ವೆಚ್ಚ ತಯಾರಿಸಿ, ಅನಂತರ ಟೆಂಡರ್ ಕರೆಯಲಾಗುವುದು. ತ್ವರಿತಗತಿಯಲ್ಲಿ ಫಲಕದ ಹೆಸರು ಬದಲಾಯಿಸುತ್ತೇವೆ.
-ರೂಪಾ ಶೆಟ್ಟಿ, ಪೌರಯುಕ್ತೆ, ನಗರಸಭೆ

ತಕ್ಷಣ ಮಾಡಬೇಕು
ಬೋರ್ಡ್ ಫಲಕಗಳಲ್ಲಿ ಮಾತ್ರ ಅಲ್ಲ. ಕೆಲ ಸಂದರ್ಭದಲ್ಲಿ ನೀರಿನ ಬಿಲ್ಗಳಲ್ಲಿ ಕೂಡಾ ಪುರಸಭೆ ಎಂದಿತ್ತು. ಹಾಗಾಗಿ ಪುರಸಭೆ ನಗರಸಭೆ ಆದ ತತ್ಕ್ಷಣ ಅದಕ್ಕೆ ತಕ್ಕಂತೆ ಬದಲಾವಣೆ ಮಾಡುವುದು ಆಡಳಿತದ ಹೊಣೆ. ಮೇಲ್ದರ್ಜೆಗೇರಿ ಹನ್ನೊಂದು ತಿಂಗಳ ಕಳೆದರೂ, ಈಗಲೂ ಹಾಗೆಯೇ ಇದೆ ಎಂದರೆ ಏನರ್ಥ..?
-ಲೋಕೇಶ್ ಅಲುಂಬುಡ ಸಾಮಾಜಿಕ ಕಾರ್ಯಕರ್ತ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು