News Karnataka Kannada
Thursday, May 02 2024
ಕರಾವಳಿ

ದೇಶ ವಿರೋಧಿ ಕೃತ್ಯ ಮಟ್ಟ ಹಾಕಲು ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಹಿಂದೂ ಸಂಘಟನೆಗಳು

Araga Jnanendra.
Photo Credit :

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿಯಾದ್ಯಂತ ನಡೆಯುತ್ತಿರುವ ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟಹಾಕಲು ಕ್ರಮಕೈಗೊಳ್ಳುವಂತೆ ಮಾನ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲಭೆ ಎಬ್ಬಿಸುವ ಒಂದು ಯೋಜಿತ ಷಡ್ಯಂತ್ರವು ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ವಿವಿಧ ನೆಪಗಳನ್ನು ಮುಂದಿಟ್ಟುಕೊಂಡು ಹಿಂದುಗಳ ಮೇಲೆ ಆಕ್ರಮಣ, ದಾಳಿ, ಹಲ್ಲೆ ಕೃತ್ಯಗಳನ್ನು ನಡೆಸುವುದು. ಶಾಂತಿ ಸಾಮರಸ್ಯವನ್ನು ಕೆಡಿಸುವುದು, ಮತಾಂಧತೆಯನ್ನು ಹರಡುವುದು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ತೊಡಗಿಕೊಂಡಿರುವುದು ಕಂಡುಬಂದಿದೆ. ಕಬಕದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ತಡೆದು ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಗೆ PFI ಮತ್ತು SDPI ಕಾರ್ಯಕರ್ತರು ಅವಮಾನ ಮಾಡಿರುವುದು, ಉಳ್ಳಾಲದ ಕಾಂಗ್ರೆಸ್ ನ ಮಾಜಿ ಶಾಸಕರಾದ ದಿ ಇದಿನಬ್ಬರವರ ಕುಟುಂಬಕ್ಕೆ ಭಯೋತ್ಪಾದಕರ ಜೊತೆ ನಂಟಿನ ಆರೋಪದಲ್ಲಿ NIA ದಾಳಿ, ಗೋ ಕಳವು – ಗೋಕಳ್ಳ ಸಾಗಣೆ, ಗೋ ಹತ್ಯೆ, ಲವ್ ಜಿಹಾದ್, ಮತಾಂತರ, ಹಿಂದು ಪವಿತ್ರ ಕ್ಷೇತ್ರಗಳ ಅಪವಿತ್ರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ದೈವ ದೇವರುಗಳ ಬಗ್ಗೆ ಅಶ್ಲೀಲಾವಾಗಿ ಚಿತ್ರಿಸಿ ಅವಮಾನ ಮಾಡುತ್ತಿರುವಂತಹ ಕೆಲವು ಘಟನೆಗಳು ಇದಕ್ಕೆ ತಾಜಾ ಸಾಕ್ಷಿ. ಅದರಿಂದ ತಾವು ಈ ಬಗ್ಗೆ ಪರಿಶೀಲಿಸಿ ಶಾಂತಿ ಭಂಜಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಈ ಕೆಳಗಿನ ವಿಷಯಗಳನ್ನು ಮಾನ್ಯ ಗೃಹ ಸಚಿವರ ಗಮನಕ್ಕೆ ತಂದಿದ್ದು
1) ಕಬಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥ ಯಾತ್ರೆಗೆ ಅಡ್ಡಿಪಡಿಸಿದ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಅವಮಾನಿಸಿದ ಆರೋಪಿಗಳಿಗೆ ರಾಷ್ಟ್ರದ್ರೋಹದ ಮೊಕ್ಕದ್ದಮೆಯನ್ನು ಧಾಖಲಿಸಬೇಕು.
2) ಕರಾವಳಿಯಲ್ಲಿ ಉಗ್ರಗಾಮಿಗಳ ಜೊತೆ ಕೆಲವರಿಗೆ ಸಂಪರ್ಕವಿದ್ದು ಕರಾವಳಿಯನ್ನು ಭಯೋತ್ಪಾದನಾ ಚಟುವಟಿಕೆಯ ತಾಣವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ನಿಗ್ರಹ ಮಾಡಲು ಮಂಗಳೂರಿನಲ್ಲಿ NIA ಕಚೇರಿಯನ್ನು ಸ್ಥಾಪಿಸಬೇಕು
3) ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದು ಯುವತಿಯರನ್ನು ಮದುವೆಯಾಗಿ ಇಸ್ಲಾಮಿಗೆ ಮಾತಾಂತರ ಮಾಡಿ ಷಡ್ಯಂತ್ರ ಲವ್ ಜಿಹಾದ್, ಮದುವೆಯಾದ ಯುವತಿಯರನ್ನು ದೇಶದ್ರೋಹದ, ಸಮಾಜ ದ್ರೋಹದ ಚಟುವಟಿಕೆಗಳಿಗೆ ತೊಡಗಿಸುತ್ತಿರುವುದು ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಲವ್ ಜಿಹಾದ್ ತಡೆ ಕಾನೂನು ತರಬೇಕು.
4 ) ಸಾಮಾಜಿಕ ಜಾಲತಾಣಗಲ್ಲಿ ಹಿಂದು ದೈವ ದೇವರುಗಳ ಬಗ್ಗೆ ಅಷ್ಲೀಲವಾಗಿ ಚಿತ್ರಿಸಿ ಅವಹೇಳನ ಅಪಮಾನ ಮಾಡುವುದು ಮತ್ತು ಹಿಂದು ಸಂಘಟನೆಯ ನಾಯಕರ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು.ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಾನ್ಯ ಗೃಹ ಸಚಿವರಿಗೆ ವಿನಂತಿ ಮಾಡಲಾಯಿತು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ, ವಿಭಾಗ ಬಜರಂಗದಳ ಸಂಯೋಜಕ್ ಭುಜಂಗ ಕುಲಾಲ್, ಹಿಂಜಾವೇ ಪ್ರಾಂತ ಕಾರ್ಯದರ್ಶಿ ರಾಧಾಕೃಷ ಅಡ್ಯಂತಾಯ, ಪ್ರಾಂತ ಉಪಾಧ್ಯಕ್ಷರು ಕಿಶೋರ್ ಕುಮಾರ್ ಈ ಸಂಧರ್ಭದಲ್ಲಿ ಉಪಸ್ಥಿತಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು