ಮಂಗಳೂರು: ಉಳಾಯಿಬೆಟ್ಟುವಿನಲ್ಲಿ ಎನ್.ಯು.ಆರ್.ಎಮ್. ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಗದ್ದೆಗೆ ಉರುಳಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ ಆರು ಮಂದಿ ಪ್ರಯಾಣಿಕರಲ್ಲಿ ಇಬ್ಬರು ಗಾಯಗೊಂಡಿದ್ದು, ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಗದ್ದೆಗೆ ಉರುಳಿದೆ.
ಸಾಮಾನ್ಯವಾಗಿ ಈ ಬಸ್ಸಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜಾ ದಿನವಾದ್ದರಿಂದ ಭಾರೀ ಪ್ರಮಾಣದ ಅಪಘಾತ ತಪ್ಪಿದಂತಾಗಿದೆ.