ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.
ಮಂಗಳೂರಿನ ಆಕಾಶವಾಣಿ ಬಳಿ ಇರುವ ಕದ್ರಿ ಪಾರ್ಕ್ ನ ಒಳಗಡೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಪ್ರೇಮಿಗಳಿಬ್ಬರನ್ನು ಕಾಸರಗೋಡು ಮೂಲದವರು ಎಂದು ಹೇಳಲಾಗಿದೆ. ಸಂಜೆ ವಿಹಾರಕ್ಕೆಂದು ಬಂದಿದ್ದ ಜೋಡಿ, ಕೆಲಕಾಲ ಕದ್ರಿ ಪಾರ್ಕ್ ನಲ್ಲಿ ಸುತ್ತಾಡಿದ್ದರು ಎಂದು ಹೇಳಲಾಗಿದ್ದು, ನಂತರ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣವೇ ಸ್ಥಳೀಯರು ಜೋಡಿಯನ್ನು ಆಸ್ಪತ್ರೆಗೆ . ಘಟನೆ ಕುರಿತಂತೆ ಕದ್ರಿ ಪೊಲೀಸ್ ಪ್ರಕರಣ ದಾಖಲಾಗಿದೆ.