ಬೆಳ್ತಂಗಡಿ: ಅವಳಿ ಮಕ್ಕಳನ್ನು ಹೊಂದಿರುವ ತಾಯಿಯೊಬ್ಬಳು ಮಕ್ಕಳಿಗೂ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು ತಾಯಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಕ್ಕಳು ಬದುಕುಳಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸೋಮವಾರ ಉಜಿರೆ ಗ್ರಾಮದ ಓಡಲ ಎಂಬಲ್ಲಿ ನಡೆದಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬೇಬಿ ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು. ತಾನು ಆತ್ಮಹತ್ಯೆ ಮಾಡಿಕೊಳ್ಳುವಾಗ ಅವಳಿ ಮಕ್ಕಳಾದ ಅಕ್ಷರ ಹಾಗು ಅಪ್ಸರ ಅವರಿಗೂ ನೇಣು ಬಿಗಿದಿದ್ದಳು. ತಾಯಿ ಸಾವನ್ನಿಪ್ಪಿದ್ದು, ಮಕ್ಕಳು ಬದುಕುಳಿದಿದ್ದಾರೆ.
ಶಿವಮೊಗ್ಗ ಮೂಲದ ಕುಂಟುಂಬ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಉಜಿರೆಗೆ ಬಂದು ಬದುಕು ನಡೆಸುತ್ತಿದ್ದರು. ಗಂಡ ಉಜಿರೆಯಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದು ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಂದರ್ಭ ಈ ದುರ್ಘಟನೆ ನಡೆದಿದೆ. ಮಕ್ಕಳಿಗೆ ಎರಡು ವರ್ಷ ಎಂಟು ತಿಂಗಳಾಗಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಪತಿ ಕಂಗಾಲಾಗಿದ್ದು ಅವರಿಗೆ ಮಧ್ಯಾಹ್ನ ಮನೆಗೆ ಬಂದಾಗ ವಿಚಾರ ತಿಳಿಯಿತು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಬೆಳ್ತಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.