ಯಾದಗಿರಿ: ಕೇಂದ್ರ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್ ಬಾಕ್ಸ್ಗಳು ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದಲ್ಲಿ ನಡೆದಿದೆ.
ನೂರಾರು ನಿರೋಧ್ (ಕಾಂಡೋಮ್) ಬಾಕ್ಸ್ಗಳು ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೇ ಬೇಕಾಬಿಟ್ಟಿಯಾಗಿ ರಸ್ತೆ ಬದಿ ಇಳಿಸಿ ಹೋದ್ರಾ ಅನ್ನೋ ಸಂಶಯವೂ ವ್ಯಕ್ತವಾಗಿದೆ.
ಬಾಕ್ಸ್ಗಳಲ್ಲಿ ತುಂಬಿದ ಕಾಂಡೋಮ್ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಆಗಬೇಕಿತ್ತು. 2026ರ ವರೆಗೆ ಅವಧಿ ಇರೋದು ಬಾಕ್ಸ್ ಮೇಲೆ ನಮೂದಾಗಿದೆ. ಆದ್ರೆ ಏಕಾಏಕಿ ಇಷ್ಟೊಂದು ಬಾಕ್ಸ್ಗಳನ್ನ ರಸ್ತೆ ಮಧ್ಯೆ ಇಳಿಸಿ ಹೋಗಿದ್ದು ಯಾರು ಅನ್ನೋದು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಪ್ರಾರಂಭಿಸಲಾಗಿದೆ.