ರಾಯಚೂರು( ಫೆ.23): ಉಮ್ರಾ ಯಾತ್ರೆಗೆ ತೆರಳಿದ್ದ ರಾಯಚೂರು ಮೂಲದ ನಾಲ್ವರು ದುಬೈನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮೃತರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಶಫಿ ಸುಲ್ಲೇದ (53), ಅವರ ಪತ್ನಿ ಶಿರಾಜ್ ಬೇಗಂ (47), ಮಗಳು ಶಿಫಾ (20) ಮತ್ತು ತಾಯಿ ಬೀಬಿ ಜಾನ್ (64) ಎಂದು ಗುರುತಿಸಲಾಗಿದೆ.
ರಾಯಚೂರು ಎಸ್ಪಿ ಬಿ.ನಿಖಿಲ್ ಮಾತನಾಡಿ, ಮೃತ ಶಫಿ ಸುಲ್ಲೇದ ಅವರ ಪುತ್ರ ಸಮೀರ್ ಗಂಭೀರವಾಗಿ ಗಾಯಗೊಂಡಿದ್ದು, ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೆಬ್ರವರಿ 14 ರಂದು ಕುಟುಂಬವು ರಾಯಚೂರಿನಿಂದ ಮೆಕ್ಕಾಗೆ ಹೋಗಿತ್ತು. ಮಂಗಳವಾರ (ಫೆಬ್ರವರಿ 21) ಸಂಜೆ ಅವರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ದುಬೈನಲ್ಲಿ ಈ ಅಪಘಾತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಬಸ್ ಕಂಟೇನರ್ಗೆ ಡಿಕ್ಕಿ ಹೊಡೆದಿದೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ನಾವು ಕಾಯುತ್ತಿದ್ದೇವೆ ಮತ್ತು ಅಧಿಕಾರಿಗಳು ಸಂತ್ರಸ್ತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಅವರು ಹೇಳಿದರು.