News Karnataka Kannada
Monday, May 13 2024
ಕಲಬುರಗಿ

ಸಾರ್ವಜನಿಕ ಶೌಚಾಲಯಕ್ಕಾಗಿ ಗದಿಗೆದರಿದ ಮಹಿಳೆಯರ ಹೋರಾಟ..!

Women's fight for public toilets
Photo Credit : News Kannada

ಅಫಜಲಪುರ: ತಾಲೂಕಿನ ಕಟ್ಟ ಕಡೆಯ ಹಳ್ಳಿ ಗಡಿ ಗ್ರಾಮ ಬಳೂರ್ಗಿ ಗ್ರಾಮದಲ್ಲಿ ಬೃಹತ್ ರಸ್ತಾ ರುಕೊ ಹೋರಾಟ ನಡೆಯಿತು. ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆಯಿಂದಾಗಿ ಕೀಲೊ ಮೀಟರಯಿಂದ ವಾಹನಗಳ ನಿಲುಗಡೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಸದಾಶಿವ ಕ್ಷತ್ರಿ, ಭಾರತ ದೇಶದ ಪ್ರಧಾನ ಮಂತ್ರಿಗಳು ಸ್ವಚ್ಛ ಭಾರತ ಯೋಜನೆಯಡಿ ಪ್ರತಿಯೊಬ್ಬ ಭಾರತೀಯ ಮಹಿಳೆಯರಿಗೆ ವೈಯಕ್ತಿಕ ಶೌಚಾಲಯ ಮತ್ತು ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಕಡ್ಡಾಯವಾಗಿ ನಿರ್ಮಾಣ ಮಾಡಿಕೊಡುವುದಾಗಿ ಮಾನ್ಯ ಪ್ರಧಾನ ಮಂತ್ರಿಗಳು ತಿಳಿಸದ್ದಾರೆ. ಆದರೆ ಗ್ರಾಮಿಣ ಭಾಗದಲ್ಲಿ ಮಹಿಳೆಯರಿಗೆ ಇನ್ನೂ ಕೂಡಾ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ ಎಂಬುವುದು ವಿಪರ್ಯಾಸವೆ ಸರಿ. ಅಫಜಲಪುರ ತಾಲೂಕಿನ ಗಡಿಗ್ರಾಮವಾದ ಬಳೂರ್ಗಿ ಗ್ರಾಮದಲ್ಲಿ ಮಹಿಳೆಯರಿಗೆ ಇರುವ ಸುಮಾರು 60 ವರ್ಷದಿಂದಿರುವ ಮಹಿಳಾ ಶೌಚಾಲಯವನ್ನು ಗ್ರಾಮದ ವ್ಯಕ್ತಿಯೊಬ್ಬರಿಂದ ತೆರುವುಗೊಳಿಸುವುದಲ್ಲದೆ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದನ್ಮ ಮನಗಂಡ ಗ್ರಾಮದ ಮಹಿಳೆಯರು ತಾಲೂಕು ಪಂಚಾಯತಿ ಅಧಿಕಾರಿಗಳ, ತಹಶೀಲ್ದಾರ ಕಾರ್ಯಾಲಕ್ಕೆ ಅಲೆದು ಅಧಿಕಾರಿಗಳಿಗೆ ಮನವಿ ಸಲ್ಲಿಸಿ‌ದರು ಯಾವುದೆ ಕ್ರಮ ಜರುಗಿಸಿಲ್ಲ. ಅದಲ್ಲದೇ ಮಹಿಳಾ ಶೌಚಾಲಯ ಜಾಗದಲ್ಲಿರುವ ಶೌಚಾಲಯ ತೆರುವುಗೊಳಿಸಲು ಗ್ರಾಮ ಪಂಚಾಯತಿಯವರ ಕುಮ್ಮಕ್ಕು ಇದೆ ಎಂಬುವುದು ಮೇಲ್ನೋಟಕ್ಕೆ ಕಾಣುತ್ತದೆ. ಈ ಕೂಡಲೇ ಗ್ರಾಮ ಪಂಚಾಯತಿ ಪರವಾನಿಗೆ ಪಡೆಯದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿರುವವರ ವಿರುದ್ದ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಗ್ರಾಮದ ಬಡ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದರು.

ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಬಸವರಾಜ ಕೊರಳಿ ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಧೋರಣೆ ಮಹಿಳೆಯರ ಶೌಚಾಲಯ ವಿಷಯದಲ್ಲಿ ಎದ್ದು ಕಾಣುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಮಾಡುವುದಾಗಿ ಬಳೂರ್ಗಿ ಗ್ರಾಮದ ಬಡ ಮಹಿಳೆಯರಿಂದ ಹಣ ವಸೂಲಿ ಮಾಡಿದ ಪಂಚಾಯತಿ ಕಂಪ್ಯೂಟರ್ ಆಪರೇಟರ ಹಾಗೂ ಸಂಭಂದಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಈ ಕೂಡಲೇ ವಜಾಗೊಳಿಸಬೇಕು. ಎರಡು ದಿನಗಳ ಒಳಗಾಗಿ ಮಹಿಳೆಯರ ಶೌಚಾಲಯ ಇರುವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯತ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಖಾರವಾಗಿ ನುಡಿದರು.

ಪ್ರತಿಭಟನೆಯನ್ನುದೇಶಿಸಿ ಮಾತನಾಡಿದ ಸಂಘಟನೆ ತಾಲೂಕು ಉಪಾಧ್ಯಕ್ಷ ಮುತ್ತು ಕುರಿಮನಿ ನಮಗೆ ಹೋರಾಟದ ಶಕ್ತಿ ನೀಡಿರುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾವು ನ್ಯಾಯಯುತವಾಗಿ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುತ್ತೆವೆ. ಗ್ರಾಮದ ಮಹಿಳೆಯರು ತಾಲೂಕು ಅಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಅಳಲನ್ನು ತೊಡಿಕೊಂಡರೆ ಅದಕ್ಕೆ ಸ್ಪಂದಿಸದ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಖಂಡಿಸುತ್ತೆವೆ. ನ್ಯಾಯ ಕೆಳಲು ಬಂದ ಮಹಿಳೆಯರಿಗೆ ಹೆದರಿಸಿ ಬೆದರಿಸಿ ಕಳುಹಿಸುವ ಅಧಿಕಾರಿಗಳ ವಿರುದ್ದ ನಾವು ಪ್ರತಿಭಟಿಸುತ್ತೆವೆ ಎಂದರು.

ನಂತರ ಮಾತನಾಡುವ ಗ್ರಾಮದ ಮಹಿಳಾ ಮುಖ್ಯಸ್ಥೆ ಮತ್ತು ಹೋರಾಟಗಾರ್ತಿ ಬಸಮ್ಮ ಗುತ್ತೇದಾರ, ನಮ್ಮ ಗ್ರಾಮದಲ್ಲಿ ಇಲ್ಲಿಯವರೆಗೆ ಹೋರಾಟಗಳೇ ನಡೆದಿಲ್ಲ.ಹಂತದರಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿದ್ದೆವೆ ಎಂದರೆ ಅಧಿಕಾರಿ ವರ್ಗ ಕಣ್ಣು ಮುಚ್ಚಿ ಕುಳಿತಿದೆವೂ ಅಥವಾ ಬಲಾಢ್ಯರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆಯೊ ಎಂಬುವುದು ತಿಳಿಯದಾಗಿದೆ ಎಂದರು. ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ ಎಂದು ತಮಗೆ ಮನವರಿಕೆ ಮಾಡಲು ಬಂದವರಿಗೆ ನೀವು ಬೆದರಿಸುವುದು ಸರಿಯಲ್ಲ. ನಮ್ಮ ಗ್ರಾಮದ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸದಿದ್ದರೆ ಜಿಲ್ಲಾ ಪಂಚಾಯತ ಮುಂದೆ ಪ್ರತಿಭಟನೆ ಮಾಡುತ್ತೆವೆ ಎಂದರು‌.

ಇದೆ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಗೌರಾವಾಧ್ಯಕ್ಷರಾದ ಮನೋಹರ ರಾಠೋಡ,ಶರಣು ದಿವಾಣಜಿ,ತಾ.ಪ್ರ.ಕಾರ್ಯದರ್ಶಿ ಶರಣಯ್ಯ ಮಠಪತಿ,ದಯಾನಂದ ಪಾಟೀಲ,ನಂದಕುಮಾರ ಹರಳಯ್ಯ,ಈರಣ್ಣಗೌಡ ಪಾಟೀಲ, ಬೈಲಪ್ಪ ಗೌರ,ಜಗದಿಶ ತಳವಾರ,ಗ್ರಾಮದ ಮುಖಂಡರಾದ ದೌಲಪ್ಪ ಪಾಟೀಲ, ಅಶೋಕ ಪಾಟೀಲ,ಜಟ್ಟೆಪ್ಪ ಹರಳೆಕಾರ, ಬಸವರಾಜ ನಂದಿಕೊಲ, ಸೇರಿದಂತೆ ಗ್ರಾಮದ ಮಹಿಳೆಯರಾದ ಕಮಲಾಬಾಯಿ,ಪಾರ್ವತಿ,ಯಲ್ಲಮ್ಮ, ಜಕ್ಕವ್ವ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು