ಕಲಬುರಗಿ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟ ಘಟನೆ ಶನಿವಾರ ಆಳಂದ ತಾಲ್ಲೂಕಿನ ಸಾವಳೇಶ್ವರ ಸಮೀಪ ನಡೆದಿದೆ.
ಮೃತರು ಸೊಲ್ಲಾಪುರ ಸಮೀಪದ ಭಂಕಲಗಿ ನಿವಾಸಿ ಸಂತೋಷ ಲಕ್ಷ್ಮಣ ಉಮರ್ಗಿ(30) ಹಾಗೂ ಅಫಜಲಪುರ ತಾಲ್ಲೂಕಿನ ಅಳಗಿ ಗ್ರಾಮದ ಮಲ್ಲು ರಾಯಪ್ಪ(30). ಮೃತರು ಆಳಂದದಿಂದ ಸೊಲ್ಲಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.