News Karnataka Kannada
Saturday, April 27 2024
ಕಲಬುರಗಿ

ವಚನ ಭ್ರಷ್ಟರಿಂದ ವಚನ ಪರಿಪಾಲಕ ರಾಮನ ಹೆಸರು ದುರ್ಬಳಕೆ: ಪ್ರಿಯಾಂಕ್ ಖರ್ಗೆ

ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.
Photo Credit : NewsKarnataka

ಕಲಬುರಗಿ: ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.

10 ವರ್ಷಗಳ ಹಿಂದೆ ಬಿಜೆಪಿಯವರು ಭವಿಷ್ಯ ಕಾಲದ ಕನಸುಗಳನ್ನು ಬಿತ್ತಿ ಮತ ಕೇಳಿದ್ದರು.ಈಗ 10 ವರ್ಷ ಕಳೆದ ನಂತರ ಭೂತಕಾಲದ ವಿಷಯಗಳ ಮೇಲೆ ಮತ ಕೇಳುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.

ಈ ಭವಿಷ್ಯದಿಂದ ಭೂತಕಾಲದ ರಾಜಕೀಯದ ನಡುವಿನ 10 ವರ್ಷ ಯಾವುದೇ ಸಾಧನೆ ಇಲ್ಲದೆ, ಆಡಳಿತ ನಡೆಸಿದರು. 10 ವರ್ಷಗಳ ಆಡಳಿತದ ನಂತರವೂ ಅಚ್ಛೆ ದಿನಗಳ ಭರವಸೆ ಈಡೇರಲಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸಿಗಲಿಲ್ಲ, ಆರ್ಥಿಕ ಸಮಾನತೆ ಬರಲಿಲ್ಲ, ಬೆಲೆ ಏರಿಕೆ ಪರಿಹಾರ ಸಿಗಲಿಲ್ಲ, ರೂಪಾಯಿ ಮೌಲ್ಯ ಕಾಣಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ಸ್ವಿಸ್ ಬ್ಯಾಂಕ್ ಮಾಹಿತಿ ತರುತ್ತೇವೆ ಅಂದವರು ಎಸ್‌ಬಿಐ ಬ್ಯಾಂಕ್ ಮಾಹಿತಿಯನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು