ಭೂತಾನ್: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೂತಾನ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಆಯೋಜಿಸಿದ ಭೋಜನ ಕೂಟದಲ್ಲಿ ಭಾಗಿಯಾದರು.
ಭಾರತ-ಭೂತಾನ್ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮೋದಿಗೆ ಭೂತಾನ್ನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ’ ನೀಡಲಾಯಿತು.
ಈ ವೇಳೆ ಅವರು ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಅವರು ಲಿಂಗಕಾನಾ ಅರಮನೆಯಲ್ಲಿ ಖಾಸಗಿ ಭೋಜನದ ಆತಿಥ್ಯ ವಹಿಸಿದ್ದರು. ಆಗ ವಾಂಗ್ಚುಕ್ ಅವರ ಕುಟುಂಬದೊಂದಿಗೆ ಕೆಲ ಸಮಯ ಕಾಲಕಳೆದ ಮೋದಿ ಮಕ್ಕಳೊಡನೆ ಬೆರೆಯುತ್ತಿರುವ ಫೋಟೋ ವೈರಲ್ ಆಗಿದೆ.