News Karnataka Kannada
Monday, April 29 2024
ಕಲಬುರಗಿ

ಈರುಳ್ಳಿ ದರ ದುಪ್ಪಟ್ಟು: ಡಿಸೆಂಬರ್‌ವರೆಗೂ ದರ ಇಳಿಕೆ ಅನುಮಾನ

Onion prices likely to double, prices likely to com
Photo Credit : News Kannada

ಕಲಬುರಗಿ: ಎರಡು ತಿಂಗಳ ಹಿಂದೆ ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿದ್ದ ಟೊಮೆಟೊ ಜಾಗವನ್ನು ಈಗ ಈರುಳ್ಳಿ ಆಕ್ರಮಿಸಿದೆ. ಈರುಳ್ಳಿ ಬೆಲೆ ಬುಧವಾರಕ್ಕಿಂತ ದುಪ್ಪಟ್ಟಾಗಿದ್ದು ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ. ಬುಧವಾರ ಪ್ರತಿ ಕೆ.ಜಿಗೆ ₹ 30-₹ 40ನಂತೆ ಮಾರಾಟವಾಗಿದ್ದ ಈರುಳ್ಳಿ ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿ ಕೆ.ಜಿಗೆ ₹ 60-₹ 70ನಂತೆ ಮಾರಾಟವಾಗಿದೆ.

ನಗರದ ಎಪಿಎಂಸಿಗೆ ಪಟ್ಟಣ ಗ್ರಾಮದಿಂದ ಹೊರತುಪಡಿಸಿ ಸ್ಥಳೀಯವಾಗಿ ಬೆಳೆದ ಈರುಳ್ಳಿ ಬರುವುದಿಲ್ಲ. ಮಹಾರಾಷ್ಟ್ರದ ನಾಸಿಕ್‌ನಿಂದ ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ಏಜೆಂಟರು ತರಿಸುತ್ತಾರೆ. ಬುಧವಾರ 30 ಟನ್ (ಕಣ್ಣಿ ಮಾರುಕಟ್ಟೆ ಹೊರತುಪಡಿಸಿ) ಆವಕವಾಗಿದ್ದು ಕ್ವಿಂಟಾಲ್‌ಗೆ ಕನಿಷ್ಠ ₹ 1,500ರಿಂದ ₹ 5000 ಇತ್ತು. ಶನಿವಾರ ಆವಕ ಇದಕ್ಕಿಂತ ಕಡಿಮೆಯಾಗಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಸಧ್ಯ ಕ್ವಿಂಟಾಲ್‌ ಈರುಳ್ಳಿಗೆ ₹ 5,500ಕ್ಕಿಂತ ಹೆಚ್ಚಿನ ಬೆಲೆಯಿದ್ದು ಚಿಲ್ಲರೆ ವ್ಯಾಪಾರಿಗಳು ಸಾಗಾಟದ ವೆಚ್ಚ, ಲಾಭ ಸೇರಿ ಕೆ.ಜಿಗೆ ₹ 60-₹ 70ನಂತೆ ಮಾರಾಟ ಮಾಡುತ್ತಿದ್ದಾರೆ.

‘ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದರೆ ಈ ಹೊತ್ತಿಗೆ ಹೊಸ ಬೆಳೆ ಮಾರುಕಟ್ಟೆಗೆ ಬರುತ್ತಿತ್ತು. ಹಳೇ ಬೆಳೆ ಇಷ್ಟು ದಿನ ಬಾಳಿಕೆ ಬರುವುದಿಲ್ಲ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮೂಲಕ ಖರೀದಿಸುವ ಚಿಂತನೆಯನ್ನೂ ಸರ್ಕಾರ ಮಾಡುತ್ತಿದೆ’ ಎಂದುಎಪಿಎಂಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸ್ಥಳೀಯವಾಗಿ ಹೆಚ್ಚು ಈರುಳ್ಳಿ ಬೆಳೆಯುವುದಿಲ್ಲ, ಮಹಾರಾಷ್ಟ್ರದಿಂದ ಹೆಚ್ಚಿನ ಉತ್ಪನ್ನ ತರಿಸಬೇಕು. ಹೀಗಾಗಿ ಸಾಗಾಟ ವೆಚ್ಚವನ್ನೂ ಮಾರಾಟದ ಬೆಲೆಯಲ್ಲಿ ಸೇರಿಸುತ್ತೇವೆ. ಸದ್ಯ ಗ್ರೇಡ್‌-1 ಈರುಳ್ಳಿ ಲಭ್ಯವಿಲ್ಲ. ಡಿಸೆಂಬರ್‌ ಅಂತ್ರದವರೆಗೂ ಬೆಲೆ ಇಳಿಯುವುದು ಅನುಮಾನ’ ಎಂದು ಸಗಟು ವ್ಯಾಪಾರಿ ಸೈಫ್‌ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು