News Karnataka Kannada
Saturday, May 11 2024
ಕಲಬುರಗಿ

ಎನ್‌.ಇ.ಕೆ.ಆರ್.ಟಿ.ಸಿ ಇನ್ಮುಂದೆ “ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ”: ಡಿಸಿಎಂ ಲಕ್ಷ್ಮಣ ಸವದಿ

Lakshmansavadi Kalburgy Main 08072021
Photo Credit :

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೆಸರನ್ನು “ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ” ಎಂದು ಮರುನಾಮಕರಣ ಮಾಡಲಾಗಿದೆ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದರು.

ಈಶ್ಯಾನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ ಹಾಗೂ ಸೆಲ್ಕೋ ಸೋಲಾರ್ ಸಿಸ್ಟಮ್ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉಪಯೋಗವಾಗುವಂತೆ ವಿಶೇಷವಾಗಿ ನಿರ್ಮಿಸಿದ ಸಂಚಾರಿ ಮಹಿಳಾ ಶೌಚಾಲಯ ಹಾಗೂ ಮಗುವಿಗೆ ಹಾಲುಣಿಸುವ ವ್ಯವಸ್ಥೆ ಇರುವ ಸಂಚಾರಿ ವಾಹನವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.

“ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ” ಎಂದು ಮರುನಾಮಕರಣ ಪತ್ರವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕುರ್ಮಾರಾವ್.ಎಂ, ಅವರಿಗೆ ಹಸ್ತಾಂತರಿಸಿ ಸಚಿವರು, ಕೂಡಲೇ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕೆಂದು ಅವರು ತಿಳಿಸಿದರು.

ಕರೋನಾದಿಂದ ಉಂಟಾದ ನಷ್ಟಕ್ಕೆ ಸರ್ಕಾರವು ನಿಗಮಕ್ಕೆ ಅನುದಾನ ನೀಡುತ್ತಿದ್ದು, ಯಾವುದೇ ಸಿಬ್ಬಂದಿಯ ವೇತನವೂ ಬಾಕಿ ಇರುವುದಿಲ್ಲ. ಕರೋನಾದಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ನಿಗಮ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮದೇ ಘಟಕಗಳಲ್ಲಿ 200 ಪೆಟ್ರೋಲ್ ಬಂಕ್‍ಗಳನ್ನು ಸ್ಥಾಪನೆ ಮಾಡುವ ಯೋಜನೆಯಿದ್ದು, ಅನಾರೋಗ್ಯ ತೊಂದರೆ ಇರುವ ಸಿಬ್ಬಂದಿಗಳನ್ನು ಈ ಬಂಕ್‍ಗಳಲ್ಲಿ ಸೇವೆಗೆ ನಿಯೋಜಿಸಲಾಗುವುದು ಎಂದು ಅವರು ವಿವರಿಸಿದರು.

ಜಿಲ್ಲೆಗೆ 4 ಎಲೆಕ್ಟ್ರಿಕಲ್ ಬಸ್ಸಗಳು ಶೀಘ್ರದಲ್ಲಿಯೇ ಬರಲಿವೆ. ಈಗಾಗಲೇ ನಿಗಮದಲ್ಲಿ ಕೋರಿಯರ್ ಸರ್ವಿಸ್ ಆರಂಭವಾಗಿದೆ ಎಂದು ತಿಳಿಸಿದ ಅವರು 2 ಕೋವಿಡ್ ಲಸಿಕಾ ಬಸ್‍ಗಳನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ, ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ವಿಧಾನ ಪರಿಷತ್ ಶಾಸಕರುಗಳಾದ ಬಿ.ಜಿ ಪಾಟೀಲ, ಶಶೀಲ ಜಿ.ನಮೋಶಿ, ಎನ್ ರವಿಕುಮಾರ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಬಿ. ಟೆಂಗಳಿ, ಬೆಂಗಳೂರು ಸೆಲ್ಕೋ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಸುದಿಪ್ತ ಘೋಷ್, ರಾಯಚೂರು ಸೆಲ್ಕೋ ಹಿರಿಯ ವ್ಯವಸ್ಥಾಪಾಕ ಆನಂದ ಕುಮಾರ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಎನ್‍ಇಕೆಎಸ್‍ಆರ್‍ಟಿಸಿ ಮುಖ್ಯ ಸಂಚಾರ ನಿಯಂತ್ರಕ ಕೊಟ್ರಪ್ಪ, ವಿಭಾಗ-1 ರ ಸಂಚಾರ ನಿಯಂತ್ರಣಾಧಿಕಾರಿ ಸಂತೋಷ್ ಕುಮಾರ್ ಹೆಚ್.ವಿ, ವಿಭಾಗ-2 ರ ಸಂಚಾರ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಮಹಿಳಾ ಶೌಚಾಲಯದ ವಿಶೇಷತೆ: ಸಂಸ್ಥೆಯ ಕಾರ್ಯಾಚರಣೆಯಲ್ಲಿ 12.44 ಲಕ್ಷ ಕಿಲೋ ಮೀಟರ್ ಕ್ರಮಿಸಿದ ನಂತರ ನಿಷ್ಕ್ರಿಯಗೊಳಿಸಲಾದ ವಾಹನವನ್ನು ಉಪಯೋಗಿಸಿಕೊಂಡು ಸಾರ್ವಜನಿಕ ಮಹಿಳೆಯರ ಉಪಯೋಗಕ್ಕಾಗಿ ಶೌಚಾಲಯ ಕಮ್ ಮಗುವಿಗೆ ಹಾಲುಣಿಸುವ ವ್ಯವಸ್ಥೆಯುಳ್ಳ ಸಂಚಾರಿ ಬಸ್‍ನಲ್ಲಿ ಒಂದು ಪಾಶ್ಚಾತ್ಯ ಶೈಲಿ ಶೌಚಾಲಯ ಸೇರಿ ಮೂರು ಶೌಚಾಲಯಗಳು, ಬಾತ್ ರೂಂ, ಮಗುವಿಗೆ ಹಾಲುಣಿಸುವ ವ್ಯವಸ್ಥೆ, ಸ್ಯಾನಿಟರಿ ನ್ಯಾಪಕಿನ್ ಮಷಿನ್, ಸ್ಯಾನಿಟರಿ ನ್ಯಾಪಕಿನ್ ವಿಲೇವಾರಿ ಮಷಿನ್, ಹ್ಯಾಂಡ್ ವಾಷ್ ಬೆಸಿನ್, ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ವಿದ್ಯುತ್ ಹಾಗೂ ಲೈಟ್ ಸೌಲಭ್ಯಗಳನ್ನು ಈ ಬಸ್ ಹೊಂದಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ. ಈ ಬಸ್ ಕೇವಲ ಕಲಬುರಗಿ ನಗರದಲ್ಲಿ ಮಾತ್ರ ಸಂಚರಿಸುತ್ತದೆ. ಯಾವ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಆ ಸ್ಥಳಕ್ಕೆ ಈ ಬಸ್ ಕಳುಹಿಸಲಾಗುವುದು. ಈ ಬಸ್‍ನ ವೆಚ್ಚ 9.60 ಲಕ್ಷ ಆಗಿದ್ದು, ಆಕರ್ಷಕ ಹೊರಮೈ ಮತ್ತು ಒಳಮೈ ಒಳಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು