News Karnataka Kannada
Wednesday, April 24 2024
Cricket
ಬೀದರ್

ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ರೋಲರ್‌ ಹತ್ತಿಸಿ ನಾಶಪಡಿಸಿದ ಬೀದರ್ ಪೊಲೀಸರು

ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಚಾಲನೆ ಮಾಡುವ ಸವಾರರಿಗೆ ಬೀದರ್ ಪೊಲೀಸರು ಬುದ್ದಿ ಕಲಿಸಿದ್ದಾರೆ. 108 ಬೈಕ್‌ಗಳ ಸೈಲೆನ್ಸರ್​ಗಳ ಮೇಲೆ ರೋಲರ್ ಹತ್ತಿಸಿ ನಾಶಪಡಿಸಿದ್ದಾರೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್ ನಾಶ ಪಡಿಸಲಾಗಿದೆ.
Photo Credit : News Kannada

ಬೀದರ್: ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಚಾಲನೆ ಮಾಡುವ ಸವಾರರಿಗೆ ಬೀದರ್ ಪೊಲೀಸರು ಬುದ್ದಿ ಕಲಿಸಿದ್ದಾರೆ. 108 ಬೈಕ್‌ಗಳ ಸೈಲೆನ್ಸರ್​ಗಳ ಮೇಲೆ ರೋಲರ್ ಹತ್ತಿಸಿ ನಾಶಪಡಿಸಿದ್ದಾರೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್ ನಾಶ ಪಡಿಸಲಾಗಿದೆ.

ನಗರದ ಪೊಲೀಸ್ ಚೌಕ್ ಬಳಿ ಸಾರ್ವಜನಿಕರ ಮುಂದೆಯೇ ರೋಲರ್ ಹತ್ತಿಸಿ ಸೈಲೆನ್ಸರ್ ಗಳ ನಾಶ ಮಾಡಲಾಗಿದೆ. ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ಅವರ ಸಮ್ಮುಖದಲ್ಲಿ ಪೊಲೀಸ್ ಚೌಕ್ ಬಳಿ ಬೈಕ್ ನ‌ ಸೈಲೆನ್ಸರ್​ಗಳನ್ನು ಜೋಡಿಸಿ ರೋಲರ್ ಹತ್ತಿಸಿ ನಾಶ ಮಾಡಲಾಗಿದೆ. ಬೀದರ್ ಪೊಲೀಸರು ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್​ಗಳನ್ನು ಬೈಕ್‌ಗೆ ಅಳವಡಿಸಿಕೊಂಡು ಸಂಚಾರ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬೀದರ್ ಪೊಲೀಸರು 108 ಬೈಕ್​ಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದು ಇವುಗಳನ್ನು ರೋಲರ್ ಹರಿಸಿ ನಾಶಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು