ಬೀದರ್ : ಗಡಿ ಜಿಲ್ಲೆಯ ಬೀದರ್ನಲ್ಲಿ ಮೊದಲ ಕೋವಿಡ್ ರೂಪಾಂತರ ಸೊಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಔರದ (ಶಾ) ಗ್ರಾಮದ ನಿವಾಸಿ 55 ವರ್ಷದ ವ್ಯಕ್ತಿಗೆ ಜೆಎನ್ 1 ಸೊಂಕು ಪತ್ತೆಯಾಗಿದೆ. ಇವರು, ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮಕ್ಕೆ ಮಗಳು ಮನೆಗೆ ಆಗಮಿಸಿದ್ದರು.
ಆ ಸಂದರ್ಭದಲ್ಲಿ ಕೊರೊನಾ ಸೊಂಕಿನ ರೋಗಲಕ್ಷಣ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯ ಅಧಿಕಾರಿ ಪರೀಕ್ಷೆ ನಡೆಸಿದಾಗ ಮೊದಲ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ದೃಢಪಡಿಸಲಾಗಿದೆ.