News Karnataka Kannada
Saturday, May 18 2024
ಬೀದರ್

1.65 ಕೋಟಿ ಮೌಲ್ಯದ ಅಕ್ರಮ ಗಾಂಜಾ ಜಪ್ತಿ : ಎಸ್ಪಿ ಚನ್ನಬಸವಣ್ಣ.ಎಸ್.ಎಲ್

Illegal ganja worth Rs 1.65 crore seized: SP Channabasavanna SL
Photo Credit : News Kannada

ಬೀದರ್: 18 ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಗಾಂಜಾ ಪ್ರಕಟಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು 3 ಪ್ರತ್ಯೇಕ ಪ್ರಕಟಣಗಳಲ್ಲಿ 6 ಜನರಿಗೆ ದಸ್ತಗೀರಿ ಮಾಡಿ 1.65 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಹೇಳಿದರು.

ಅವರು ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಏಪ್ರಿಲ್ 17 ರಂದು ಆಂದ್ರಪ್ರದೇಶದಿಂದ ಮಹಾರಾಷ್ಟಕ್ಕೆ ಚಿಟಗುಪ್ಪಾ ಮಾರ್ಗವಾಗಿ ಅಕ್ರಮ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ತಕ್ಷಣ ಪೊಲೀಸ್ ತಂಡ ಕಾರ್ಯಚರಣೆಗೆ ಇಳಿದಿದೆ. ಈ ಸಂದರ್ಭದಲ್ಲಿ ಆರೋಪಿಗಳು ಭಂಗೂರ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿಂದ ಅವರು ಮಾರ್ಗ ಬದಲಾಯಿಸಿ ಒಳಮಾರ್ಗದಿಂದ ಸಂಚರಿಸಲು ಎತ್ನೀಸಿದರು ಆದರೂ ಪೊಲೀಸ್ ಇಲಾಖೆ ಇವರಿಗೆ ಖೆಡ್ಡಾ ತೊಡುವಲ್ಲಿ ಯಶಸ್ವಿಯಾಗಿದೆ ಎಂದರು

ಬೀದರ ನಗರದಲ್ಲಿ ಗಾಂಜಾ ಪ್ರಕಣಗಳು ವರದಿಯಾಗುತ್ತಿರುವ ಹಿನ್ನೆಯಲ್ಲಿ ಪೊಲೀಸ್ ಇಲಾಖೆ ಕಾರ್ಯಚರಣೆಗೆ ಮುಂದಾದ ಫಲವಾಗಿ ನಗರದಲ್ಲಿ ಎರಡು ಪ್ರತೇಕ ಪ್ರಕಣಗಳಲ್ಲಿ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ಸು ಸಿಕ್ಕಿದೆ. ಇವರಲ್ಲಿ ಒಬ್ಬ ಆರೋಪಿಯಿಂದ 4.78,000 ಮೌಲ್ಯದ 4.478 ಕೆಜಿ ಗಾಂಜಾ ಜಪ್ತಿ ಮಾಡಿದೆ. ಹಾಗೂ ಇನ್ನು ಇಬ್ಬರು ಆರೋಪಿಗಳಿಂದ 5,03,000 ಮೌಲ್ಯದ 5.ಕೆಜಿ 30 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಇವರಲ್ಲಿ ಒಬ್ಬ ಆರೋಪಿ ಫರಾರಿಯಾಗಿದ್ದು ಅವನ ಬಂಧನಕ್ಕೆ ಇಗಾಗಲೇ ಬಲೆ ಬಿಸಲಾಗಿದೆ ಎಂದು ಹೇಳಿದರು.

ಬೀದರ ಜಿಲ್ಲಾ ಪೊಲೀಸ್ ಇಲಾಖೆಯು ಗಂಜಾ ಸಾಗಾಣಿಕೆ ತಡೆಯಲು ಹಾಗೂ ಇದರ ಮೂಲ ಜಾಲವನ್ನು ಪತ್ತೆಹಚ್ಚಲು ಮಾದಕ ವಸ್ತುಗಳ ನಿಗ್ರಹ ತಳ ರಚಿಸಲಾಗಿತ್ತು ಈ ತಂಡವು ಖಚಿತ ಮಾಹಿತಿಯ ಮೇರೆಗೆ ಆಂದ್ರಪ್ರದೇಶದ ವಿಜಯವಾಡದಲ್ಲಿ ಓರ್ವ ಆರೋಪಿಯನ್ನು ಬಂದಿಸಿದೆ. ಈ ಆರೋಪಿಯು ಓರಿಸ್ಸಾ ರಾಜ್ಯದ ಮಲ್ಕಾನಗಿರಿ ಜಿಲ್ಲೆಯವನಾಗಿದ್ದು.

ಇತ ಓರಿಸ್ಸಾದ ಗಡಿ ಭಾಗದ ಹೊಲಗಳಲ್ಲಿ ಬೆಳೆದ ಗಾಂಜಾವನ್ನು ಆಂದ್ರಪ್ರದೇಶದ ಸಿಲೇರೋ ಪಟ್ಟಣ್ಣದಲ್ಲಿ ಸಂಗ್ರಹಿಸಿಡುತ್ತಿದ. ನಂತರ ದಲ್ಲಾಳಿಗಳ ಮೂಲಕ ರಾಜಮಂಡ್ರಿ, ವಿಶಾಖಪಟ್ಟಣಂ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದರು.

ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯು 325 ವಿವಿಧ ಅಪರಾಧ ಪ್ರಕಟಣಗಳನ್ನು ದಾಖಲಿಸಿ, 811 ಆರೋಪಿಗಳನ್ನು ಬಂಧಿಸಿ, 9,19,18,955 ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ 40 ಜನರ ಮೇಲೆ ರೌಡಿ ಶೀಟರ ತೆರೆಯಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಹುಮನ್ನಾಬಾದ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಾಜಪೂತ,ಬೀದರ ಉಪಾಧೀಕ್ಷಕ ಕೆ.ಎಂ ಸತೀಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು