News Karnataka Kannada
Thursday, May 02 2024
ಬೀದರ್

ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ವಿರುದ್ಧ ದೂರು

'ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಬಸವಾದಿ ಶರಣರ ಚರಿತ್ರೆ ವಿಕೃತಗೊಳಿಸುತ್ತಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು' ಎಂದು ಕೋರಿ ವಕೀಲ ಭೀಮನಗೌಡ ಪರಗೊಂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಕಳುಹಿಸಿದ್ದಾರೆ.
Photo Credit : News Kannada

ಬಸವಕಲ್ಯಾಣ: ‘ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಬಸವಾದಿ ಶರಣರ ಚರಿತ್ರೆ ವಿಕೃತಗೊಳಿಸುತ್ತಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಕೋರಿ ವಕೀಲ ಭೀಮನಗೌಡ ಪರಗೊಂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಕಳುಹಿಸಿದ್ದಾರೆ.

’12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಾಯಕ ಜೀವಿಗಳ ಚಳವಳಿ ಕಲ್ಯಾಣದಲ್ಲಿ ನಡೆದಿತ್ತು. ಈ ನೆಲ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಹಾಗೂ ಅನುಭವ ಮಂಟಪ ಎಂಬ ಜಗತ್ತಿನ ಪ್ರಥಮ ಸಂಸತ್ತು ಹೊಂದಿದ ನಾಡಾಗಿದೆ. ಆದರೆ, ಬಸವರಾಜ ಪಾಟೀಲ ಸೇಡಂ ಅವರು ಇಲ್ಲದ ವ್ಯಕ್ತಿಗಳನ್ನು ಹುಟ್ಟಿಸಿ ಶರಣರ ಚರಿತ್ರೆಯ ಜೊತೆಗೆ ಅವರನ್ನು ಜೋಡಿಸಿ ಶರಣರನ್ನು ಕುಬ್ಜಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಆಲೋಚನೆಗಳನ್ನು ಗುಪ್ತವಾಗಿ ಜಾರಿಗೊಳಿಸುವುದಕ್ಕಾಗಿಯೇ ಸೇಡಂ ಅವರು ಈ ನೆಲದಲ್ಲಿ ಬಸವಕಲ್ಯಾಣ ಕ್ಷೇತ್ರ ಸಮಿತಿ ಹುಟ್ಟು ಹಾಕಿದ್ದಾರೆ. ಇದುವರೆಗೆ ದೂರವಿದ್ದ ಅವರಿಗೆ ಇಳಿ ವಯಸ್ಸಿನಲ್ಲಿ ಈ ನೆಲದ ಮೇಲೆ ಪ್ರೀತಿ ಹುಟ್ಟಲು ಕಾರಣವೇನು? ಇಂಥ ಕಾರ್ಯಗೈಯಲು ಅವರಿಗೆ ಯಾವುದೇ ಕಾನೂನಿನ ಮತ್ತು ನೈತಿಕ ಹಕ್ಕು ಇಲ್ಲ. ಅವರ ಸಂಸ್ಥೆಯಿಂದಲೇ ಶರಣರ ಕೆಲ ಸ್ಥಳಗಳಲ್ಲಿ ತಪ್ಪುತಪ್ಪಾಗಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಇದನ್ನು ಅವರ ಗಮನಕ್ಕೆ ತಂದರೂ ಸುಮ್ಮನಿದ್ದಾರೆ. ಕುಂಟು ನೆಪ ಹೇಳುತ್ತಿದ್ದಾರೆ. ಆದ್ದರಿಂದ ದುರುದ್ದೇಶದಿಂದ ಸೇಡಂ ಅವರು ಅಳವಡಿಸಿದ ಎಲ್ಲ ಫಲಕಗಳನ್ನು ತೆರವುಗೊಳಿಸಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಮತ್ತೆ ಆ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಪರಗೊಂಡ ಅವರು ಪತ್ರಗಳನ್ನು ಕಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು