News Karnataka Kannada
Wednesday, May 01 2024
ಬೀದರ್

ಬೀರೂರು: ಗೆದ್ದರೆ ಭ್ರಷ್ಟಾ ಚಾರ ಮುಕ್ತ ಆಡಳಿತ – ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್

Congress candidate KS Anand says corruption-free governance if he wins
Photo Credit : News Kannada

ಬೀರೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೈ.ಎಸ್.ವಿ ದತ್ತ, ಹಾಗೂ ಬೆಳ್ಳಿಪ್ರಕಾಶ್  ಗೆ ಮತದಾರ ಪ್ರಭುಗಳು ಶಾಸಕ ಸ್ಥಾನದ ಒಂದೊಂದು ಅವಕಾಶ ಮಾಡಿಕೊಟ್ಟಿದ್ದೀರಿ ಅಂತಹೇ ಈ ಬಾರಿ ಈ ಬಡವರ ಮಗನಿಗೂ  ಶಾಸಕನಾಗಲು ಅವಕಾಶ ನೀಡಿ ಗೆಲ್ಲಿಸಿದರೆ ಭ್ರಷ್ಟಚಾರ ಮುಕ್ತ ಆಡಳಿತ ನೀಡಲು ಬದ್ದನಾಗಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಹೇಳಿದರು.

ಅವರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕನಕ ಬ್ರಿಕ್ಸ್ ನ ಪುಟ್ಟಣ್ಣನವರ ನಿವಾಸಕ್ಕೆ ಭೇಟಿ ನೀಡಿ, ವಿವಿಧ ಪಕ್ಷದಿಂದ ಆಗಮಿಸಿದ ಮುಖಂಡರನ್ನು ಪಕ್ಷ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ಬಿಜೆಪಿಯಂತಹ ಭ್ರಷ್ಟ ಸರ್ಕಾರವನ್ನು ಈ ಬಾರಿ ಯುವಜನತೆ ರಾಜ್ಯದಿಂದಲೆ ಕಿತ್ತೊಗೆಯುತ್ತಾರೆ. ಬಡಜನರಿಗೆ ತೆರಿಗೆ ಹಾಗೂ ಬೆಲೆ ಏರಿಕೆ ಪ್ರತಿ ನಿತ್ಯಜೀವಿಸಲು ಮರಣಪ್ರಾಶನವಾಗಿದೆ. ಜನ ಕಾಂಗ್ರೆಸ್ ನೀಡಿದ್ದ ಜನಪರ ಯೋಜನೆಗಳತ್ತ ಮತ್ತೆ ಮುಖಮಾಡಿದ್ದು, ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಅದರಂತೆ ಅನೇಕ ಜನರು ಕಾಂಗ್ರೆಸ್ ಪಕ್ಷ ಸಿದ್ದಾಂತ ನೋಡಿ ಮತ್ತೆ ಪಕ್ಷ ಸೇರ್ಪಡೆಯಾಗುತ್ತಿರುವುದು ಪಕ್ಷದ ಬಲವನ್ನು ಇಮ್ಮುಡಿಗೊಳಿಸಿದೆ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಮಹಿಳೆಯರಿಗೆ ಮಾಶಾಸನ, ನಿರುದ್ಯೋಗ ಯುವಕರಿಗೆ ಭತ್ಯೆ, ಉಚಿತ ವಿದ್ಯುತ್, ಜೀವನ ಸಾಗಿ ಸಲು ಉಚಿತ ಅಕ್ಕಿ ನೀಡಲಿದ್ದು, ಕಾರ್ಯಕರ್ತರು ಸಾಮಾನ್ಯ ನಾಗರೀಕರಿಗೆ ಈ ಯೋಜನೆಗಳ ಬಗ್ಗೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಬೇಕು. ಕಡೂರುಕ್ಷೇತ್ರಕ್ಕೆ ಉತ್ತಮ ಆಡಳಿತ, ಉತ್ತಮ ಅಭಿವೃದ್ದಿ ಯೋಜನೆಗಳನ್ನು ತರಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ತಾವೆಲ್ಲರು ಕೈಜೋಡಿಸಿ ಕೈಬಲಪಡಿಸಿ ಎಂದರು.

ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದು ಈ ಬಾರಿ ಕರ್ನಾಟದಲ್ಲಿ ಸರ್ಕಾರ ರಚನೆ ಕಾಂಗ್ರೆಸ್ಸ್‌ದ್ದಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸುಳ್ಳು ಭರವಸೆಗಳನ್ನು ಯಾರು ನಂಬಬೇಡಿ. ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನುಅವರು ಮಾಡುತ್ತಿದ್ದಾರೆ ಎಂದರು.

ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದಾಗಿ ಅಧಿಕಾರ ಹಿಡಿದಬಿಜೆಪಿ ಇಲ್ಲಿಯವರೆಗೆ ಒಂದು ಉದ್ಯೋಗವನ್ನೂ ಸೃಷ್ಟಿಸಿಲ್ಲ. ಬಿಜೆಪಿಯ ಸುಳ್ಳು ಭರವಸೆ ಗಳಿಗೆ ನಂಬಿ ಮತ ಹಾಕದೆ ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ ಕಡೂರು ಕ್ಷೇತ್ರದಲ್ಲಿ ಆನಂದ್ ಅಲೆ ಎದ್ದಿದೆತಮ್ಮಅಮೂಲ್ಯ ಮತವನ್ನು ಕೈಚಿನ್ನೆಗೆ ಹಾಕಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಜಿಯಾವುಲ್ಲಾ, ಸೊಪ್ಪುಆನಂದ್, ವಿನಾಯಕ್, ಹರ್ಷ, ಮನೋಹರ್, ಅದ್ದೂರಿಪ್ರಭು, ಹನುಮಂತರಾಜು, ಸರಸ್ವತಿಪುರಂನ ಪುಟ್ಟಸ್ವಾಮಿ ಸೇರಿದಂತೆ ಮತ್ತಿತರ ಕಾರ್ಯಕರ್ತರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು