News Karnataka Kannada
Sunday, April 28 2024
ಬೀದರ್

ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ, ಕಾಂಗ್ರೆಸ್‌ನವರಿಂದ ಅಪಪ್ರಚಾರ :ಖೂಬಾ ಖಂಡನೆ

No injustice done to Lingayats in BJP, congress is spreading misinformation: Khuba
Photo Credit : News Kannada

ಬೀದರ್ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್‌ಗಿಂತ ಅತ್ಯಧಿಕ ಸ್ಥಾನವನ್ನು ಭಾರತೀಯ ಜನತಾ ಪಾರ್ಟಿ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಿಂದ ಬಿಜೆಪಿಯಲ್ಲಿ ವೀರಶೈವ ಲಿಂಗಾಯತರ ಅಪಮಾನವನ್ನು ಮಾಡಲಾಗುತ್ತಿದೆ ಎಂದು ಹತಾಷ ಮನೋಭಾವನೆಯಿಂದ ಅಪಪ್ರಚಾರ ಮಾಡಲಾಗುತ್ತಿದೆ.

ಇದು ಸತ್ಯಕ್ಕೆ ದೂರವಾದ ಸಂಗತಿ. ಕಾಂಗ್ರೆಸ್‌ನವರು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಹಾಗೂ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಹೇಳಿದರು.
ಅವರು ಇಂದು ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ಲಾಭವನ್ನು ಪಡೆದು ಕಾಂಗ್ರೆಸ್ಸಿನ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್‌ನಲ್ಲಿ ಸೇರಿ ಅಪಾರ ಭಾಜಪಾ ಕಾರ್ಯಕರ್ತರ ಕ್ರೋಧಕ್ಕೆ ಕಾರಣರಾದರು. ಈ ಇಬ್ಬರು ನಾಯಕರು ತಮ್ಮ ರಾಜಕೀಯ ಸ್ವಾರ್ಥ ಹಾಗೂ ಲಾಭಕ್ಕಾಗಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದರು. ಇದರಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ವಿಪರೀತ ಪರಿಣಾಮ ಬೀರುವುದಿಲ್ಲ.

ಇದೇ ಬಂಡವಾಳವನ್ನು ಮಾಡಿಕೊಂಡು ಕಾಂಗ್ರೆಸ್ಸ್ನವರು ತಮ್ಮ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತರಿಗೆ ಬಿಜೆಪಿ ಪಕ್ಷದಲ್ಲಿ ಅಪಮಾನ ಮಾಡಲಾಗುತ್ತಿದೆ, ಯೋಗ್ಯ ರೀತಿಯಲ್ಲಿ ಸ್ಥಾನಮಾನ ಕೊಡಲಾಗುತ್ತಿಲ್ಲ ಎಂದು ಕಾಂಗ್ರೆಸ್ಸ್ನವರು ಆರೋಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸ್ನ ಕಾರ್ಯಧ್ಯಕ್ಷರಾದ ಈಶ್ವರ ಖಂಡ್ರೆ ಹಾಗೂ ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್‌ನ ಹೈಕಮಾಂಡ್ ಹತ್ತಿರ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕನಿಷ್ಠ 70 ಸೀಟ್‌ಗಳಾದರು ನೀಡಬೇಕು ಎಂದು ಬೇಡಿಕೆ ಇಟ್ಟಿದರು. ಆದರೆ ಕಾಂಗ್ರೆಸ್ಸ್ನಲ್ಲಿ ಕೇವಲ 47 ವೀರಶೈವ ಲಿಂಗಾಯತರಿಗೆ ಟಿಕೇಟ್‌ನ್ನು ನೀಡಲಾಗಿದೆ. ಬಿಜೆಪಿಯಲ್ಲಿ 68 ಸ್ಥಾನವನ್ನು ವೀರಶೈವ ಲಿಂಗಾಯತ ಅಭ್ಯರ್ಥಿಗೆ ನೀಡಲಾಗಿದೆ.

ಕಾಂಗ್ರೆಸ್‌ನಿಂದ ಜಾರಿ ಮಾಡಲಾದ ಸ್ಟಾರ್ ಪ್ರಚಾರಕರ ಲೀಸ್ಟ್ನಲ್ಲಿ ರಾಜ್ಯದ ಕಾರ್ಯಧ್ಯಕ್ಷರಾದ ಈಶ್ವರ ಖಂಡ್ರೆಯವರ ಹೆಸರು ಕೈಬಿಡಲಾಗಿದ್ದು, ಈ ಲಿಸ್ಟ್ನಲ್ಲಿ ಅಪರಾಧಿಕ ಪ್ರವೃತ್ತಿ ಹಾಗೂ ಆರೋಪಿ ಇದ್ದಂತಹ ವ್ಯಕ್ತಿಗಳಿಗೆ ಸ್ಥಾನವನ್ನು ಕೊಟ್ಟು ದೇಶದಲ್ಲಿ ಅಶಾಂತಿ ಹಾಗೂ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕೆಡಿಸುವ ಹುನ್ನಾರವನ್ನು ಕಾಂಗ್ರೆಸ್‌ನಿಂದ ಮಾಡಲಾಗುತ್ತಿದೆ. ಇತ್ತೀಚಿಗೆ ಕಾಂಗ್ರೆಸ್ಸ್ನ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರು ವೀರಶೈವ ಲಿಂಗಾಯತರ ಡ್ಯಾಮ್ ಒಡೆದಿದೆ ಎಂದು ಹೇಳಿಕೆ ನೀಡಿ ಅವರ ಮನದಲ್ಲಿ ವೀರಶೈವ ಲಿಂಗಾಯತರ ಬಗ್ಗೆ ಎಂತಹ ಭಾವನೆಯಿದೆ ಎಂದು ತೋರಿಸಿದ್ದಾರೆ. 2018ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರವನ್ನು ಮಾಡಲಾಗಿತ್ತು.

ಆದರೆ ಮತದಾರರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಈಗಲೂ ಕೂಡ ಕಾಂಗ್ರೆಸ್ಸಿನವರು ವೀರಶೈವ ಲಿಂಗಾಯತರ ಬಗ್ಗೆ ಅಪಪ್ರಚಾರ ಮಾಡಿ ರಾಜಕೀಯ ಲಾಭವನ್ನು ಪಡೆಯುವ ಹುನ್ನಾರ ಮಾಡಲಾಗುತ್ತಿದೆ. ಆದರೆ ಮತದಾರರು ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ ಅವರು ಮಾತನಾಡಿ ಕಾಂಗ್ರೆಸ್ಸಿನವರ ಗ್ಯಾರಂಟಿ ಕಾರ್ಡ್ನ ಮುಖಂತಾರ ಜನರಿಗೆ ವಿಭಿನ್ನ ಯೋಜನೆಯನ್ನು ಜಾರಿ ಮಾಡುವ ಅಶ್ವಾಸನೆಯನ್ನು ನೀಡುತ್ತಿದ್ದಾರೆ.

ಜನರು ಈ ಆಶ್ವಾಸನೆಗೆ ನಂಬಬಾರದು. ಕಾಂಗ್ರೆಸ್ಸ್ನವರು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಇದೇ ತರಹದ ಯೋಜನೆಯ ಆಮೀಷವನ್ನು ತೋರಿಸಿ ವಿಧಾನಸಭೆ ಚುನಾವಣೆಯಲ್ಲಿ ಜನರ ಮತವನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ಘೋಷಣಾ ಪತ್ರದಲ್ಲಿ ನೀಡಲಾದ ಯಾವುದೇ ಘೋಷಣೆಯನ್ನು ಜಾರಿಗೆ ತಂದಿಲ್ಲ. ಇದೇ ತರಹದ ಘೋಷಣೆಯನ್ನು ರಾಜ್ಯದಲ್ಲಿ ಕೂಡ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕೆ ಕಾಂಗ್ರೆಸ್ಸ್ ಹೊರಟಿದೆ. ರಾಜ್ಯದ ವಾರ್ಷಿಕ ಬಜೆಟ್‌ದ ಆಧಾರದ ಮೇಲೆ ಕಾಂಗ್ರೆಸ್‌ನಿಂದ ಜಾರಿ ಮಾಡಲಾದ ಘೋಷಣಾ ಪತ್ರದ ಯೋಜನೆಯನ್ನು ಜಾರಿ ಮಾಡುವುದು ಅಸಾಧ್ಯ ಹಾಗಾಗಿ ಜನರು ಭಾರತೀಯ ಜನತಾ ಪಾರ್ಟಿಯ ಅಭಿವೃದ್ಧಿಯ ಪರ ಸರ್ಕಾರಕ್ಕೆ ಮತವನ್ನು ನೀಡಿ ಸ್ಪಷ್ಟ ಬಹುಮತದಿಂದ ಆರಿಸಬೇಕೆಂದು ಮನವಿ ಮಾಡಿದರು.ಬೀದರ ಜಿಲ್ಲೆಯಲ್ಲಿ ಆರು ಸ್ಥಾನವನ್ನು ಗೆಲ್ಲುವ ವಿಶ್ವಾಸವನ್ನು ಮಲ್ಕಾಪೂರೆ ಅವರು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ,ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ, ರಾಷ್ಟ್ರೀಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜೈಕುಮಾರ ಕಾಂಗೆ, ಜಿಲ್ಲಾ ಪ್ರಧಾನಕಾರ್ಯದರ್ಶಿ ವಿಜಯಕುಮಾರ ಗಾದಗಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ ಟೊಣ್ಣೆ, ಬೀದರ ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ಬಿಡಿಎ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ವಕ್ತಾರರಾದ ಶಿವಪುತ್ರ ವೈದ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು