News Karnataka Kannada
Sunday, April 28 2024
ಬೀದರ್

ಬೀದರ್‌: ಸುರಕ್ಷಿತವಾಗಿ ಹೋಳಿ ಹಬ್ಬ ಆಚರಿಸಲು ಸಚಿವ ಪ್ರಭು ಚವ್ಹಾಣ ಮನವಿ

https://kannada.newskarnataka.com/karnataka/karavali/mangaluru/2023/03/06/239619/mangaluru-vedavyas-kamath-lays-foundation-stone-for-construction-of-12-rooms-of-the-school/
Photo Credit : News Kannada

ಬೀದರ್‌: ಬಣ್ಣಗಳ ಹಬ್ಬವಾದ ಹೋಳಿ ಹಬ್ಬದಲ್ಲಿ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಭಾರತದಲ್ಲಿ ಹೋಳಿ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದಿದ್ದಾರೆ.

ವಿಷಪೂರಿತ ರಾಸಾಯನಿಕ ಅಂಶಗಳಿರುವ ಬಣ್ಣಗಳ ಬಳಕೆಯಿಂದ ಚರ್ಮ, ಕಣ್ಣಿನ ಮೇಲೆ‌ ದುಷ್ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಹಾಗಾಗಿ ಹೋಳಿ ಹಬ್ಬದ ಸಂಭ್ರಮದಲ್ಲಿ ಆದಷ್ಟು ನೈಸರ್ಗಿಕ ಮತ್ತು ಸುರಕ್ಷಿತ ಎಂದು ಪ್ರಮಾಣಿಸಲ್ಪಟ್ಟ ಬಣ್ಣಗಳ ಬಳಕೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಯಾರಿಗೂ ಒತ್ತಾಯಪೂರ್ವಕವಾಗಿ ಬಣ್ಣ ಎರಚದೇ ಹಬ್ವವನ್ನು ಶಾಂತಿ, ಸೌಹಾರ್ದಯುತವಾಗಿ ಆಚರಿಸಬೇಕು. ಬಣ್ಣಗಳ ಹಬ್ಬ ನಾಡಿಗೆ ಸಮೃದ್ಧಿ ತರಲಿ ಎಂದು ಸಚಿವರು ಶುಭ ಕೋರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು