News Karnataka Kannada
Tuesday, May 14 2024
ಬೀದರ್

5 ಲಕ್ಷ ರೂ.ಗಳಿಗೂ ಹೆಚ್ಚು ಸಾಲ: ಟೊಮೊಟೋ ಬೆಳೆದು ಕಂಗಾಲದ ಬೀದರ್ ರೈತ

Bidar farmer grows tomato with loan of over Rs 5 lakh
Photo Credit : News Kannada

ಬೀದರ್: ಮೂರು ತಿಂಗಳ ಹಿಂದೆ ಟೊಮೊಟೋ ಬೆಳೆ ಅಂದರೆ ಬಂಗಾರದ ಬೆಳೆ ಎಂಬಂತಾಗಿತ್ತು. ಒಂದು ಎಕರೆಯಲ್ಲಿ ಟೊಮೊಟೋ ಬೆಳೆ ಇದ್ದರೆ ಸಾಕು ಅಬ್ಬಬ್ಬಾ ಲಕ್ಷಾಧಿಪತಿ ಎನ್ನುತ್ತಿದ್ದರು. ಆದರೆ ಈಗ ಟೊಮೊಟೋ ದರದಲ್ಲಿ ಧಿಡೀರ್ ಕುಸಿತದಿಂದ ಬೀದರ್​ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಪರಿಸ್ಥಿತಿ ಒಂದು ರೀತಿ ಲಾಟರಿ ಖರೀದಿಸಿದ ಹಾಗೆ ಆಗಿದೆ. ಲಾಟರಿ ಹತ್ತಿದರೇ ಲಕ್ಷಾಧಿಪತಿ, ಕೋಟ್ಯಾಧಿಪತಿ ಆಗಬಹುದು, ಲಾಟರಿ ಬರಲಿಲ್ಲ ಅಂದ್ರೆ ರೋಡಲ್ಲಿ ಮಲಗುವ ಸ್ಥಿತಿ. ಬೀದರ್​ನ ಬಡ ಕುಟುಂಬದ ರೈತನ ಪರಿಸ್ಥಿತಿ ಅದೇ ಆಗಿದೆ.

ಬಡ್ಡಿಯಿಂದ 5 ಲಕ್ಷದವೆಗೂ ಸಾಲ ತಂದು 3 ಎಕರೆ ಜಮೀನನಲ್ಲಿ ಟೊಮೊಟೋ ಹಾಕಿದ್ದೇವೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ನಾವು ಈಗ ಏನೂ ಮಾಡಬೇಕೊ ದಿಕ್ಕು ತೋಚದಂತಾಗಿದೆ ಎಂದು ಬೀದರ್​ನ ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದ ರೈತ ವೈಜಿನಾಥ್ ಗೋಳು.

ಟೊಮೊಟೋ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರು ಕಟಾವಿನ ಕೂಲಿ ಹಣ ಸಿಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕೇವಲ 5 ರೂ.ಗೆಖರೀದಿ

3 ತಿಂಗಳ ಹಿಂದೆ ಕಿಲೋಗೆ 120 ರಿಂದ 150 ರೂ. ಇದ್ದ ಟೊಮೊಟೋ ಈಗ ಕೇವಲ 20 ರಿಂದ 25 ರೂ. ಇದೆ. ಅಂದು ಒಂದು ಕ್ಯಾರೆಟ್​ಗೆ 2 ಸಾವಿರ ಇತ್ತು. ಇವತ್ತು ಒಂದು ಕ್ಯಾರೆಟ್ ಟೊಮೊಟೋಗೆ 200 ರಿಂದ 300 ಕೊಡುತ್ತಿದ್ದಾರೆ. ಅಂದ್ರೆ ರೈತರಿಂದ ಡಿಲರ್​​ಗಳು ಕೇವಲ 5 ರೂ.ನಂತೆ ಖರೀಸುತ್ತಿದ್ದಾರೆ. ಅಂದಿನ ದರ ನೋಡಿ ಸಾಲ ಮಾಡಿ ಟೊಮೊಟೋ ಬೆಳೆದ ರೈತನ ಕುಟುಂಬದಲ್ಲಿಗ ವಿಘ್ನ ಶುರುವಾಗಿದೆ.

ರೈತನಿಗೆ ಒಮ್ಮೆ ಅತಿವೃಷ್ಠಿ, ಮತ್ತೊಮ್ಮೆ ಅನಾವೃಷ್ಠಿ ಸ್ಥಿತಿ ದೆವ್ವ-ಭೂತಗಳಂತೆ ಕಾಡುತ್ತಿರುತ್ತವೆ. ಎಲ್ಲಾ ಸರಿಯಾಗಿ ಬಂದರೂ ಬೆಂಬಲ ಬೆಲೆ ಸಿಗದೇ ಬೆಳೆದ ಬೆಳೆ ರಸ್ತೆಯಲ್ಲಿ ಬಿಸಾಕುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಅಂತದೆ ಪರಿಸ್ಥಿತಿ ರೈತ ವೈಜಿನಾಥ್​ಗೂ ಬಂದಿದೆ. ಈ ರೈತನ ಕಣ್ಣೋರಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು