News Karnataka Kannada
Friday, May 03 2024
ಬೀದರ್

ಬೀದರ ಬಸವ ಉತ್ಸವ-2023: ಲೆಕ್ಕಪತ್ರಗಳನ್ನು ನೀಡಿದ ಜಿಲ್ಲಾಧಿಕಾರಿ

Bidar Basava Utsav-2023: Dc gives accounts
Photo Credit : News Kannada

ಬೀದರ: ಬಸವ ಉತ್ಸವ-2023 ಅತ್ಯಂತ ಅದ್ಧೂರಿಯಿಂದ ಜರುಗಿ ಯಶಸ್ವಿಯಾಗಿರುವುದು ತುಂಬಾ ಸಂತೋಷದ ವಿಷಯ. ಅದರಲ್ಲೂ ವಿಶೇಷವಾಗಿ ಉತ್ಸವದ 2 ದಿನಗಳಲ್ಲಿ ಅಂದಾಜು 2 ಲಕ್ಷ ಜನ ಪಾಲ್ಗೊಂಡು ಯಶಸ್ವಿ ಮಾಡಿರುವುದು ತುಂಬಾ ಅವಿಸ್ಮರಣೀಯ ಎಂದು ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ತಿಳಿಸಿದ್ದಾರೆ.

ಇದಕ್ಕೆ ಸಹಕರಿಸಿರುವ ಜಿಲ್ಲೆಯ ಎಲ್ಲಾ ಪೂಜ್ಯರಿಗೂ, ಜನಪ್ರತಿನಿಧಿಗಳಿಗೂ, ಸಾರ್ವಜನಿಕರಿಗೂ, ಪತ್ರಕರ್ತರಿಗೂ, ಕಲಾವಿದರಿಗೂ, ಅಧಿಕಾರಿಗಳಿಗೂ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಜಿಲ್ಲಾಡಳಿತವು ಬಸವ ಉತ್ಸವವನ್ನು ಬೀದರ ಉತ್ಸವದಂತೆ ಮುಕ್ತ ಮತ್ತು ಪಾರದರ್ಶಕವಾಗಿ ನಿರ್ವಹಿಸಿದೆ. ಸ್ಟೇಜ್, ಬ್ಯಾರಿಕೇಡಿಂಗ್, ಲೈಟಿಂಗ್, ಮ್ಯುಸಿಕ್, ಸೌಂಡ್, ಚರ‍್ಸ್, ಶಾಮಿಯಾನ ಇವುಗಳನ್ನು ಬೀದರ ಉತ್ಸವ-2023 ರಲ್ಲಿ ಇ-ಪ್ರಕ್ಯೂರಮೆಂಟ ಮೂಲಕ ಟೆಂಡರ ನೀಡಲಾಗಿತ್ತು. ಬೀದರ ಉತ್ಸವದ ದರಗಳಲ್ಲಿಯೇ ಬಸವ ಉತ್ಸವದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಹೊರಗಿನ ಕಲಾವಿದರೊಂದಿಗೆ ಸಂಧಾನ ಮಾಡಿ ಆದಷ್ಟು ಕಡಿಮೆ ದರಗಳನ್ನು ನಿಗದಿಪಡಿಸಲಾಗಿದೆ.

ಬೀದರ ಉತ್ಸವದ 2,34,59,342 ರೂ.ಗಳ ಉಳಿತಾಯ ಮೊತ್ತದಲ್ಲಿ 1,55,44,500 ರೂ. ಮೊತ್ತದಲ್ಲಿ ಬೀದರ ಕೋಟೆಯಲ್ಲಿ ಶಾಶ್ವತವಾಗಿ ಲೇಸರ ಲೈಟ್, ಸೌಂಡ ಮತ್ತು ಮ್ಯುಜಿಕ ಶೋವನ್ನು ಅಳವಡಿಸಲು ಯೋಜಿಸಲಾಗಿತ್ತಾದರೂ ಬಸವ ಉತ್ಸವ-2023ಕ್ಕೆ ಹಣದ ಅವಶ್ಯಕತೆವಿದ್ದುದರಿಂದ ಒಟ್ಟು 1,50,70,614 ರೂ.ಗಳ ಮೊತ್ತವನ್ನು ಬಸವ ಉತ್ಸವ-2023ಕ್ಕೆ ವೆಚ್ಚ ಮಾಡಲಾಗಿದೆ. ಪ್ರಸ್ತುತ ಉಳಿತಾಯಗೊಂಡಿರುವ 93,80,728 ರೂ.ಗಳಲ್ಲಿ ಬೀದರ ಕೋಟೆಯಲ್ಲಿ ಶಾಶ್ವತವಾಗಿ ಲೇಸರ ಲೈಟ್, ಸೌಂಡ್ ಮತ್ತು ಮ್ಯುಜಿಕ್ ಶೋವನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.

ಬಸವ ಉತ್ಸವ-2023 ಪಾವತಿ ಮಾಡಿದ ರಸೀದಿಗಳ ವಿವರ: ಬೀದರ ಉತ್ಸವ-2023 ಉಳಿತಾಯ ಮೊತ್ತ (ಈಗಾಗಲೇ ಘೋಷಿಲಾಗಿದೆ) 2,34,59,342 ರೂ., ವಚನಗಳು ಇತ್ಯಾದಿಗಳ ಶಾಶ್ವತ ಫ್ಲೆಕ್ಸ್ ಕಾಮಗಾರಿಗಳಿಗಾಗಿ ಆಯುಕ್ತರು ಬಿಕೆಡಿಬಿ ಯಿಂದ ಪಡೆದ ಮೊತ್ತ 7,00,000 ರೂ., ಮಕ್ಕಳ ಮನರಂಜನಾ ನಾಟಕಗಳ ಹರಾಜಿಗೆ 2,05,000 ರೂ., ಎಸ್‌ಎಚ್‌ಜಿ ಸ್ಟಾಲ್ಸ್ ಮೊತ್ತ 87,000 ರೂ. ಸೇರಿ ಒಟ್ಟು ಪಾವತಿಸಿದ ರಸೀದಿಗಳ ಮೊತ್ತ 2,44,51,342 ರೂ.
ಬಸವ ಉತ್ಸವ-2023 (ಭಾಗ-2)ಕ್ಕೆ ಖರ್ಚು ಮಾಡಿದ ವಿವರ: 1,59,70,614 ರೂ., ಒಟ್ಟು ಉಳಿತಾಯ ಮೊತ್ತ 93,80,728 ರೂ., ಈ ಹಣದಲ್ಲಿ ಲೇಸರ ಲೈಟ್, ಸೌಂಡ ಮತ್ತು ಮ್ಯುಜಿಕ ಶೋ ಖರ್ಚು ಮಾಡಲಾಗಿದೆ.

ಬಸವ ಉತ್ಸವಕ್ಕೆ ಖರ್ಚು ಮಾಡಿದ ಹಣದ ವಿವರ: ಮಹಿಳಾ ಉತ್ಸವಕ್ಕೆ 21,300 ರೂ., ಬಸವ ನಡಿಗೆ 58,200 ರೂ., ಸಂಪರ್ಕ ಅಧಿಕಾರಿಗಳ ವೆಚ್ಚ 14,000 ರೂ., ಸಾರಿಗೆ ವೆಚ್ಚ (ಮುಂಗಡ) 1,50,000 ರೂ., ಅಕ್ಕಮಹಾದೇವಿ ನಾಟಕಕ್ಕೆ 30,000 ರೂ., ಸ್ಥಳೀಯ ಕಲಾವಿದರಿಗೆ ಪಾವತಿ 2,65,000 ರೂ., ಬ್ಯಾಂಕ್ ಚಾರ್ಜ 5,000 ರೂ., ಮೆರವಣಿಗೆ ಮತ್ತು ಮುಖ್ಯ ವೇದಿಕೆ ಕಲಾವಿದರಿಗೆ ಪಾವತಿ 13,76,000 ರೂ., ಕುಸ್ತಿ ಉತ್ಸವಕ್ಕೆ 1,32,300 ರೂ., ಕಲಾವಿದರಿಗೆ ಮತ್ತು ಭಾಷಣಕಾರರಿಗೆ 2,25,000 ರೂ., ಬಿಜ್ಜಳನ ನಾಟಕ್ಕೆ 1,00,000 ರೂ., ಅನುಭವಗೋಷ್ಠಿ (ಪ್ರಯಾಣ ಭತ್ಯೆ, ಮೈಕ್ ಮತ್ತು ಧ್ವನಿ ವರ್ಧಕಗಳು, ಲೈವ್ ಡೆಮೊ ವ್ಯವಸ್ಥೆ, ಛಾಯಾಗ್ರಹಣ ಮತ್ತು ವಿಡಿಯೋಗ್ರಾಫಿ) 91,000 ರೂ., ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ 1,62,000 ರೂ., ಗೋಷ್ಠಿ ಕಲಾವಿದರ ಪಾವತಿ 1,75,000 ರೂ., ಕಲಾವಿದರ ಆಯ್ಕೆಗೆ 13 ತೀರ್ಪುಗಾರರಿಗೆ 26,000 ರೂ., ಕಲಾವಿದರಿಗೆ ಹಾರ, ಶಾಲುಗಳಿಗೆ 2,800 ರೂ., ಸ್ಥಳೀಯ ಕಲಾವಿದರಿಗೆ ಹುಲಸೂರನಿಂದ ಬಸವಕಲ್ಯಾಣಕ್ಕೆ ಜೀಪ್ ವ್ಯವಸ್ಥೆಗೆ 4,000 ರೂ., ಕಲಾವಿದರಿಗೆ ಹೋಟೆಲ್ ಆಹಾರದ ಬಿಲ್ಲು 59,700 ಸೇರಿ ಒಟ್ಟು 28,97,300 ರೂ. ಪಾವತಿಸಲಾಗಿದೆ.

ಹೊರಗಿನ ಕಲಾವಿದರಾದ ಅನನ್ಯ ಭಟ್ಟ, ಷಣ್ಮೂಖ ಪ್ರೀಯಾ, ಸಾಧನಾ ಸರಗಮ್, ನಿಹಾಲ್ ಕೌರ, ರಘು ದೀಕ್ಷಿತ ಮತ್ತು ನಿರೂಪಕರಗೆ ಸೇರಿ 37,58,000 ರೂ. ಮತ್ತು ಸ್ಥಳೀಯ ಕಲಾವಿದರಿಗೆ 1,75,000 ರೂ. ಸೇರಿ ಒಟ್ಟು 39,33,000 ರೂ. ಪಾವತಿಸಲಾಗಿದೆ.

ಮುಖ್ಯ ವೇದಿಕೆ, ಗ್ರೀನ್ ರೂಮ್, ಮಾಧ್ಯಮ ಕೊಠಡಿ, ಖುರ್ಚಿಗಳು, ಸ್ಟಾಲ್‌ಗಳು, ಬ್ಯಾರಿಕೇಡಿಂಗ್, ಪೆಂಡಾಲ್ ಇತ್ಯಾದಿಗೆ 14,50,000 ರೂ., ಸೌಂಡ್ ಮತ್ತು ಸ್ಟೇಜ್ ಲೈಟ್ಸ್ಗೆ 11,00,148 ರೂ., ಇಲ್ಯುಮಿನೇಷನ್‌ಗೆ 5,75,000 ರೂ., ವೇದಿಕೆಯ ಹಿನ್ನೆಲೆಗೆ 2,20,660 ರೂ. ಸೇರಿ ಒಟ್ಟು 33,45,808 ರೂ.ಗಳು ಪಾವತಿಸಲಾಗಿದೆ.

ಇತರೇ ಉತ್ಸವಕ್ಕೆ ಪಾವತಿ: ಪ್ರಚಾರ ರಥಕ್ಕೆ 1,66,000 ರೂ., ಬಿ.ಎಸ್.ಎನ್.ಎಲ್.ಹೈ ಸ್ಪೀಡ್ ಇಂಟರನೆಟ್‌ಗೆ 7,159 ರೂ., ಬೋಟಿಂಗ್ 1,63,100 ರೂ., ಪುಷ್ಪ ಪ್ರದರ್ಶನಕ್ಕೆ 2,00,000 ರೂ., ಚಿತ್ರಕಲಾಕ್ಕೆ 2,65,000 ರೂ., ಪತಂತ ಉತ್ಸವಕ್ಕೆ 1,25,000 ರೂ., ಪಟಾಕಿ ಸಿಡಿಮದ್ದು 4,00,000 ರೂ., ಪ್ರೀಟಿಂಗ್ ಚಾರ್ಜ 5,75,000 ರೂ., ಡ್ರೇಸ್ ಫಾರ ಅಕ್ಕಾ ಫೋರ್ಸ 60,000 ರೂ., ಏರೋಸ್ಪೋಟ್ಸ್ 5,00,000 ರೂ., ಏರ ಟ್ರಾವಲ್ ಚಾರ್ಜಸ್ 6,21,651 ರೂ., ಲ್ಯಾಪಟಾಪ ಬಾಡಿಗೆ 59,000 ರೂ., ಆರ್‌ಟಿಓ ಮೂಲಕ ರಸ್ತೆ ಸಾರಿಗೆ 3,21,528 ರೂ., ಹೋಟೆಲ್ ಬಿಲ್ 2,99,467 ರೂ., ಫೋಟೋಗ್ರಾಫರ್ & ವಿಡಿಯೋ ಗ್ರಾಫರ್ ಚಾರ್ಜ 54,800 ರೂ., ಇತರೆ ಉತ್ಸವಗಳ ಬಾಕಿ ಪಾವತಿ 10,76,301 ರೂ. ಉಪ ಮೊತ್ತ 48,94,506 ರೂ.ಗಳ ಸೇರಿ ಒಟ್ಟು ಮೊತ್ತ 1,50,70,614 ರೂ.ಗಳು ಖರ್ಚಾಗಿರುತ್ತದೆ.

ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಬಸವ ಉತ್ಸವ-2023ರ ಲೆಕ್ಕ ಪತ್ರಗಳನ್ನು ಪ್ರಕಟಿಸಲು ವಿಳಂಭವಾಗಿರುತ್ತದೆ. ಸದರಿ ಮಾಹಿತಿಯನ್ನು ಬೀದರ ಜಿಲ್ಲೆಯ ಎನ್‌ಐಸಿ ವೆಬ್‌ಸೈಟ್ ನಲ್ಲಿ ಪ್ರಚುರಪಡಿಸಲಾಗಿದೆ.

ಪೂಜ್ಯರು, ಜನಪ್ರತಿನಿಧಿಗಳು, ಪತ್ರಕರ್ತರು, ಸಾಹಿತಿಗಳು ಮತ್ತು ಕಲಾವಿದರು ಜಿಲ್ಲಾಡಳಿತದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಗಳನ್ನು ಉಳಿಸಿಕೊಂಡಿರುವುದಾಗಿ ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ಬಸವ ಉತ್ಸವ-2023ಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು