Bengaluru 22°C
Ad

ಪರಿಷತ್ ಚುನಾವಣಾ ಪ್ರಚಾರ: ಲೋಕಸಭಾ ಅಭ್ಯರ್ಥಿ ಗೆಲ್ಲುವ ಇಂಗಿತ ವ್ಯಕ್ತ ಪಡಿಸಿದ ಶಾಸಕ

ಈಶಾನ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಪರ ಪ್ರಚಾರ ಸಭೆ ಅಫಜಲಪುರ ಪಟ್ಟಣದ ನ್ಯಾಶನಲ್ ಫಂಕ್ಷನ್ ಹಾಲನಲ್ಲಿ ನಡೆಯಿತು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲರ ಪರ ಅಫಜಲಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಟ್ಟಾಳುಗಳು ಬಿರುಸಿನ ಪ್ರಚಾರ ಸಭೆ ನಡೆಸಿದರು.

ಕಲಬುರಗಿ: ಈಶಾನ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಪರ ಪ್ರಚಾರ ಸಭೆ ಅಫಜಲಪುರ ಪಟ್ಟಣದ ನ್ಯಾಶನಲ್ ಫಂಕ್ಷನ್ ಹಾಲನಲ್ಲಿ ನಡೆಯಿತು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲರ ಪರ ಅಫಜಲಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಟ್ಟಾಳುಗಳು ಬಿರುಸಿನ ಪ್ರಚಾರ ಸಭೆ ನಡೆಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಪದವೀಧರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾವಾಗಲೂ ಮೇಲುಗೈ ಸಾಧಿಸುತ್ತ ಬಂದಿದೆ.ಈ ಬಾರಿಯೂ ಚಂದ್ರಶೇಖರ ಪಾಟೀಲರ ಗೆಲ್ಲುವ ನಿಶ್ಚಿತ ಎಂದರು.

ಪದವೀಧರರು ಪ್ರಜ್ಞಾವಂತರಾಗಿದ್ದು ಸಾರ್ವಜನಿಕ ಕಳಕಳಿ ಮತ್ತು ಅಭಿವೃದ್ಧಿ ಪರ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಗೆಲ್ಲಿಸುವ ವಿಶ್ವಾಸ ವ್ಯಕ್ತ ಪಡಿಸಿದರು. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ನಂತರ ಮಾತನಾಡಿದ ಶಾಸಕ ಎಮ್.ವೈ.ಪಾಟೀಲ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಕೆಲಸಗಳು ಮತ್ತು ಪಕ್ಷದ ಕೆಲಸಗಳಿಗೆ ಮನ್ನಣೆ ನೀಡಿ ಚಂದ್ರಶೇಖರ ಪಾಟೀಲರಿಗೆ ಮತದಾನ ನೀಡುವ ಮುಖಾಂತರ ವಿಧಾನ ಪರಿಷತಗೆ ಪದವೀಧರರು ಕಳುಹಿಸುವ ವಿಶ್ವಾಸ ನಮಗಿದೆ. ನಾವೆಲ್ಲರೂ ಉತ್ಸಾಹದಿಂದ ಲೋಕಸಭಾ ಚುನಾವಣೆಯನ್ನು ಇದೀಗ ತಾನೆ ಮುಗಿಸಿದ್ದೆವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದೆಗೆಲ್ಲುವ ನಂಬಿಕೆ ನನಗಿದೆ. ಅದೆ ರೀತಿಯಾಗಿ ಪದವೀಧರರ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲರು ನಿಮ್ಮೆಲ್ಲರ ಸಹಕಾರದಿಂದ ಗೆಲ್ಲುತ್ತಾರೆ ಎಂದರು.

ಜೂನ್ 3 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅಫಜಲಪುರ ಕ್ಷೇತ್ರದ ಪದವೀಧರರು ಹೆಚ್ಚು ಮತಗಳನ್ನು ನೀಡುವ ಮುಖಾಂತರ ಗೆಲುವಿಗೆ ಕಾರಣಿಕರ್ತರಾಗಬೇಕು ಎಂದರು.

ಇದೆ ಸಂದರ್ಭದಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ, ಮತೀನ್ ಪಟೇಲ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ,ರೇಣುಕಾ ಸಿಂಗೆ,ಶರಣು ಕುಂಬಾರ, ಸಿದ್ದು ಶಿರಸಗಿ,ಶಿವಾನಂದ ಗಾಡಿಸಾವಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad