Bengaluru 22°C
Ad

ಕಾಂಗ್ರೆಸ್ ಸರಕಾರ ಪತನಕ್ಕೆ ಹೆಚ್ಚುವರಿ ಡಿಸಿಎಮ್ ವಿಚಾರ ಸಾಕು: ಸಿ.ಟಿ.ರವಿ

Ct Ravi

ಕಲಬುರಗಿ: ರಾಜ್ಯ ಸರ್ಕಾರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ಡಿಸಿಎಂ ಹುದ್ದೆಗಳ ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತದೆ ಎಂದು ಬಿಜೆಪಿ ಮುಖಂಡ, ನೂತನ ಎಂಎಲ್ಸಿ ಸಿ.ಟಿ.‌ರವಿ ಭವಿಷ್ಯ ನುಡಿದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಕೆಲವು ಸಚಿವರು ಸೇರಿದಂತೆ ಆಡಳಿತ ಪಕ್ಷದ ಬಹುತೇಕ ಶಾಸಕರು ಅಸಮಾಧಾನಗೊಂಡಿರುವುದರಿಂದ ಕಾಂಗ್ರೆಸ್ ಸರ್ಕಾರ ತಾನಾಗಿಯೇ ಪತನವಾಗಲಿದೆ, ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ.

ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಯ ಜಾಗವನ್ನು ಭ್ರಷ್ಟಾಚಾರ ಆವರಿಸಿಕೊಂಡಿದೆ. ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಇತರೆ ಖಾತೆಗಳಿಗೆ ವರ್ಗಾವಣೆಯಾಗಿದ್ದು, ವರ್ಗಾವಣೆಯಾದ ಹಣವನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಬಳಸಿಕೊಂಡಿರಬಹುದು ಎಂದು ಆರೋಪಿಸಲಾಗಿದೆ.

ಲಂಬಾಣಿ ಅಭಿವೃದ್ಧಿ ನಿಗಮ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನ ಕೂಡ ವರ್ಗಾವಣೆಯಾಗಿದೆ ಎಂದು ಆರೋಪಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ತಮ್ಮ ಖಾತೆಯ ಬಗ್ಗೆ ಕಾಳಜಿ ವಹಿಸಿ ಮಾತನಾಡುವ ಬದಲು ಎಲ್ಲಾ ಸಚಿವರ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಸಚಿವಾಲಯದ ವಿಷಯದ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎಂದು ರವಿ ವ್ಯಂಗ್ಯವಾಡಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದ್ದು, ಕಳೆದ 13 ತಿಂಗಳಿಂದ ಒಂದೇ ಒಂದು ಅಭಿವೃದ್ಧಿ ಯೋಜನೆ ಆರಂಭಿಸದೆ 5 ಗ್ಯಾರಂಟಿ ಯೋಜನೆಯೇ ಅಭಿವೃದ್ಧಿ ಹೇಳುತ್ತಿದೆ. ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಒಮ್ಮೆ ಮಾತ್ರ ಹೆಚ್ಚಿಸಿದೆತ್ತು. ಅದು ಕೂಡ ಲೀಟರ್‌ಗೆ 1 ರೂ ಮಾತ್ರ ಹೆಚ್ಚಿಸಿತ್ತು. ಆದರೆ, ಇಂದು ಎಲ್ಲಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ‘ಸಿದ್ದರಾಮಯ್ಯ ಅವರು 13 ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಅನ್ನು 2 ಬಾರಿ ಹೆಚ್ಚಿಸಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಮತ್ತು ಅಬಕಾರಿ ಸುಂಕ, ಮೋಟಾರು ವಾಹನ ತೆರಿಗೆ ಇತ್ಯಾದಿಗಳ ಮೇಲಿನ ಸೆಸ್ ಅನ್ನೂ ಹೆಚ್ಚಿಸಿದ್ದಾರೆ. ಉಸಿರಾಡುವ ಗಾಳಿಯನ್ನು ಹೊರತುಪಡಿಸಿದರೆ, ಬೇರೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುವುದು ಕಾಂಗ್ರೆಸ್ ಸರ್ಕಾರದ ಘೋಷಣೆ ಮಾಡದ 6ನೇ ಗ್ಯಾರಂಟಿಯಾಗಿದೆ ಎಂದು ಟೀಕಿಸಿದರು.

Ad
Ad
Nk Channel Final 21 09 2023
Ad