Bengaluru 24°C
Ad

ಕಲಬುರಗಿ: ಜಯದೇವ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಆಹಾಕಾರ

ಬಡ ಜನರಿಗೆ ಉಪಯೋಗ ಆಗಲಿ ಅಂತ ಆರಂಭಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆ, ಆದರೆ ಕಳೆದ ಮೂರು ದಿನಗಳಿಂದ ಆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದನ್ನೇ ಬಂದ್ ಮಾಡಲಾಗಿದೆ.

ಕಲಬುರಗಿ: ಬಡ ಜನರಿಗೆ ಉಪಯೋಗ ಆಗಲಿ ಅಂತ ಆರಂಭಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆ, ಆದರೆ ಕಳೆದ ಮೂರು ದಿನಗಳಿಂದ ಆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದನ್ನೇ ಬಂದ್ ಮಾಡಲಾಗಿದೆ.

ಏಕೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ ಎಂದು ಆಸ್ಪತ್ರೆಗೆ ಬರುವ ರೋಗಿಗಳು ಪ್ರಶ್ನೆ ಮಾಡುವಂತಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತವರು ಜಿಲ್ಲೆಯಲ್ಲಿರುವ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ಬಣ್ಣ ಬಯಲಾಗಿದೆ.

ಸರಕಾರವೇನೋ ಹಿಂದುಳಿದ ಕಲ್ಯಾಣ ಕರ್ನಾಟಕದ ಹೃದಯ ಸಂಬಂಧಿ ರೋಗಿಗಳು ದೂರದ ಬೆಂಗಳೂರಿಗೆ ಬರೋಕೆ ತೊಂದರೆಯಾಗುತ್ತೆ ಎಂದು ಕಲಬುರಗಿಯಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸಿತ್ತು.

ಅಲ್ಲದೇ ಪ್ರತಿ ನಿತ್ಯ 300 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.ಆದರೆ ಸದ್ಯ ನೀರಿಲ್ಲದೇ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಎದುರಾಗಿದೆ.

ಪ್ರತಿ ನಿತ್ಯ 300 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಅದರಲ್ಲೂ ಒಪಿಡಿಗೆ ಬರುತ್ತಿದ್ದರು. ಅದರಲ್ಲಿ 30-40 ಜನ ದಾಖಲು ಕೂಡ ಆಗ್ತಾರೆ. ಆದರೆ ಸದ್ಯ ಅವರಲ್ಲಿ ದೊಡ್ಡ ಆತಂಕದ ಕಾರ್ಮೋಡ ಎದುರಾಗಿದೆ

Ad
Ad
Nk Channel Final 21 09 2023
Ad