Bengaluru 22°C
Ad

ಮಹಿಳೆ ಕಿಡ್ನಾಪ್ ಕೇಸ್‌ : ಎಸ್‌ಐಟಿ ಟೀಮ್ ಬಂದರೂ ಭವಾನಿ ಸುಳಿವಿಲ್ಲ

ಕೆ.ಆರ್ ನಗರದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸಿನಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರ ವಿಚಾ ರಣೆಗಾಗಿ ಹೊಳೆನರಸೀಪುರದ ಅವರ ಮನೆಗೆ ಆಗವಿಸಿರುವ ಎಸ್ ಐಟಿ ಟೀಮ್, ಭವಾನಿ ಅವರ ದರ್ಶನಕ್ಕಾಗಿ ಬೆಳಗಿನಿಂದ ಕಾದು ಕುಳಿತಿತು. ಆದರೆ ಭವಾನಿ ಅವರು ಮನೆಯಲ್ಲಿಲ್ಲ, ಎಲ್ಲಿ ಹೋಗಿದ್ದಾರೆ ಎಂಬ ಸುಳಿವನ್ನೂ ನೀಡಿಲ್ಲ.

ಹಾಸನ: ಕೆ.ಆರ್ ನಗರದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸಿನಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರ ವಿಚಾ ರಣೆಗಾಗಿ ಹೊಳೆನರಸೀಪುರದ ಅವರ ಮನೆಗೆ ಆಗವಿಸಿರುವ ಎಸ್ ಐಟಿ ಟೀಮ್, ಭವಾನಿ ಅವರ ದರ್ಶನಕ್ಕಾಗಿ ಬೆಳಗಿನಿಂದ ಕಾದು ಕುಳಿತಿತು. ಆದರೆ ಭವಾನಿ ಅವರು ಮನೆಯಲ್ಲಿಲ್ಲ, ಎಲ್ಲಿ ಹೋಗಿದ್ದಾರೆ ಎಂಬ ಸುಳಿವನ್ನೂ ನೀಡಿಲ್ಲ.

ಹೊಳೆನರಸೀಪುರದ ಚೆನ್ನಾಂ ಬಿಕಾ ನಿವಾಸದಲ್ಲಿ ತನಿಖೆಗೆ ತಾನು ಲಭ್ಯ ಇರುತ್ತೇನೆ ಎಂದು ತಿಳಿಸಿದ್ದ ಭವಾನಿ, ಮಧ್ಯಾಹ್ನ ಎರಡು ಗಂಟೆಯಾದರೂ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆಗಾಗಿ ಬಂದ ಎಸ್‌ಐಟಿ ಅಧಿಕಾರಿಗಳು ಮನೆಯ ಆವರಣದಲ್ಲೇ ಜೀಪ್‌ನಲ್ಲಿ ಕಾದು ಕುಳಿತರು. ಮನೆಯ ನೆಲಮಾಳಿಗೆಯಲ್ಲಿ ಭವಾನಿ ಅವರ ?ಒಂದು ಕೋಟಿ ರೂಪಾಯಿ? ಬೆಲೆಯ ಕಾರು ನಿಂತಿದ್ದು, ಕಾರನ್ನು ಮನೆಯಲ್ಲೇ ಬಿಟ್ಟು ಭವಾನಿ ತೆರಳಿದ್ದಾರೆ. ಏಂ-೦೫-ಂಐ-೮೦೫೫ (boss) ನಂಬರ್‌ನ ಕಿಯಾ ಕಾರ್ನಿವಲ್ ಕಾರನ್ನು ಮನೆಯ ನೆಲಮಾಳಿಗೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಕಾರಿನ ಪಕ್ಕದಲ್ಲೇ ನಿಲ್ಲಿಸಲಾಗಿದೆ.

ನಿನ್ನೆ ಕಿಡ್ನಾಪ್ ಕೇಸ್‌ನಲ್ಲಿ ಭವಾನಿ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಹೀಗಾಗಿ ಇವತ್ತೋ ನಾಳೆಯೋ ಭವಾನಿ ಬಂಧನ ಆಗುವುದು ಖಚಿತವಾಗಿದೆ. ಹೀ ಗಾಗಿ ಎಸ್‌ಐಟಿ ಮುಂದೆ ಬಾರದೆ ತಪ್ಪಿಸಿಕೊಂಡಿದ್ದಾರೆ. ಬಂಧನ ಭೀತಿಯಿಂದ ವಿಚಾರಣೆಗೆ ಗೈರು ಹಾಜರಾಗಿದ್ದಾರೆ ಎಂದು ಭಾವಿಸ ಲಾಗಿದೆ. ಭವಾನಿ ಅವರ ಬರವಿ ಗಾಗಿ ಸಂಜೆ ೫ ಗಂಟೆಯವರೆಗೂ ಎಸ್‌ಐಟಿ ತಂಡ ಕಾಯಲಿದೆ ಎಂದು ತಿಳಿದು ಬಂದಿದೆ.

ಕಿಡ್ನಾಪ್ ಆರೋಪ ಪ್ರಕರಣದಲ್ಲಿ ತಮ್ಮ ತನಿಖೆ ಅವಶ್ಯಕತೆ ಇದ್ದು, ತನಿಖೆಗೆ ಸಹಕರಿಸಬೇಕಾಗಿ ಎಸ್‌ಐಟಿ ಹೇಳಿತ್ತು. ತನಿಖೆಗೆ ಹೊಳೆನರಸೀಪುರದ ನಿವಾಸದಲ್ಲಿ ತಾವು ಲಭ್ಯವಿರುವುದಾಗಿ ಮೇ ೧೫ರಂದು ಎಸ್‌ಐಟಿಗೆ ಭವಾನಿ ಲಿಖಿತ ಪತ್ರ ನೀಡಿದ್ದರು. ಭವಾನಿ ಅವರ ಪತ್ರವನ್ನೇ ಉಲ್ಲೇಖಿಸಿ ನಿನ್ನೆ ಎಸ್‌ಐಟಿ ನೋಟೀಸ್ ನೀಡಿತ್ತು. ಪ್ರಕರಣ ಸಂಬಂಧ ತಮ್ಮ ವಿಚಾರಣೆ ಅಗತ್ಯ ಇದೆ, ಹಾಗಾಗಿ ಜೂನ್ ೧ರಂದು ವಿಚಾರಣೆಗೆ ಬರುವುದಾಗಿ ತಿಳಿಸಿತ್ತು.
ಜೂನ್ ೧ರ ಶನಿವಾರ ಮಹಿ ಳಾ ಅಧಿಕಾರಿ ಜೊತೆ ಹೊಳೆನರಸೀಪುರದ ಚನ್ನಾಂಬಿಕ ನಿವಾಸಕ್ಕೆ ತಾವು ಬರುವುದಾಗಿ ಎಸ್‌ಐಟಿ ಮುಖ್ಯಸ್ಥ ಹೇಮಂತ್ ಕುಮಾರ್ ತಿಳಿಸಿದ್ದರು. ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆ ನಡುವೆ ನೀವು ತಿಳಿಸಿದ ವಿಳಾಸಕ್ಕೆ ಬರುತ್ತೇವೆ. ಈ ಸಮಯದಲ್ಲಿ ನೀವು ಖುದ್ದು ಹಾಜರಿರಬೇಕು ಎಂದು ಸೂಚಿಸಿದ್ದರು.

ಭವಾನಿ ರೇವಣ್ಣ ಅವರಿಗೆ ಕ್ಯಾನ್ಸರ್ ಇದೆ. ಚಿಕಿತ್ಸೆ ಪಡೆಯಲು ನಿರೀಕ್ಷಣಾ ಜಾಮೀನು ನೀಡಬೇ ಕೆಂದು ಭವಾನಿ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಾಡಿದ್ದರು. ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ವಿರುದ್ಧ ದೂರು ದಾಖಲಾಗಿತ್ತು. ಬಂಧನ ಭೀತಿಯಿಂದ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದಲ್ಲಿ ದಾಖಲಾಗಿದ್ದ IPಅ ಸೆಕ್ಷನ್ ೧೨೦ಬಿ ಕ್ರಿಮಿನಲ್ ಕಾನ್ಸ್‌ಪಿರೆಸಿ ಯನ್ನು ಗಂಭೀರವಾಗಿ ಪರಿಗಣಿಸಿ ರುವ ಕೊರ್ಟ್, ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ.

ನಿನ್ನೆ ಅವರ ಪುತ್ರ, ಪ್ರಕರಣದ ಪ್ರಧಾನ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡಿದೆ. ಪ್ರಜ್ವಲ್ ಅವರ ವೈದ್ಯಕೀಯ ತಪಾಸಣೆ ಕೂಡ ನಡೆಸಲಾಗಿದೆ. ಪ್ರಜ್ವಲ್ ಅವರನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲು ಎಸ್‌ಐಟಿ ಮುಂದಾಗಿದೆ.

Ad
Ad
Nk Channel Final 21 09 2023
Ad