Bengaluru 22°C
Ad

ಧಾರವಾಡ: ಡೆಂಗ್ಯೂ ಪತ್ತೆ, ಅಧಿಕಾರಿಗಳು ಮುಮ್ಮಿಗಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ

ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ 46 ಜನರಲ್ಲಿ ಶಂಕಿತ ಜ್ವರ ಪತ್ತೆಯಾಗಿದ್ದು, ಅದರಲ್ಲಿ ನಾಲ್ವರಲ್ಲಿ ಡೆಂಗ್ಯೂ ಇರುವುದು ಪಕ್ಕಾ ಆಗಿದೆ. ಅಲ್ಲದೇ ಮೊನ್ನೆ ಮೂರು ವರ್ಷದ ಮಗು ಕೂಡ ಸಾವಿಗೀಡಾಗಿದ್ದು, ಆ ಮಗುವಿನಲ್ಲೂ ಡೆಂಗ್ಯೂ ಜ್ವರ ಇದ್ದಿದ್ದು ಪತ್ತೆಯಾಗಿದೆ.

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ 46 ಜನರಲ್ಲಿ ಶಂಕಿತ ಜ್ವರ ಪತ್ತೆಯಾಗಿದ್ದು, ಅದರಲ್ಲಿ ನಾಲ್ವರಲ್ಲಿ ಡೆಂಗ್ಯೂ ಇರುವುದು ಪಕ್ಕಾ ಆಗಿದೆ. ಅಲ್ಲದೇ ಮೊನ್ನೆ ಮೂರು ವರ್ಷದ ಮಗು ಕೂಡ ಸಾವಿಗೀಡಾಗಿದ್ದು, ಆ ಮಗುವಿನಲ್ಲೂ ಡೆಂಗ್ಯೂ ಜ್ವರ ಇದ್ದಿದ್ದು ಪತ್ತೆಯಾಗಿದೆ. ಈ ವರದಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿಗಳು, ತಾಲೂಕಾ ಆರೋಗ್ಯಧಿಕಾರಿಗಳು, ಜಿಲ್ಲಾ ಕೀಟಶಾಸ್ತ್ರಜ್ಞರು ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಲಾರ್ವಾ ನಿರ್ಮೂಲನಾ ಕಾರ್ಯದ ಸಮೀಕ್ಷೆ ಮೇಲ್ವಿಚಾರಣೆ ಮಾಡಲು ಮುಮ್ಮಿಗಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದರು.

ಜ

ಅಲ್ಲದೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕಾ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿಯಂತ್ರಣ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿದರು. ತಕ್ಷಣದಿಂದ ಶುಷ್ಕ ದಿನ ಅನುಸರಿಸಲು, ಘನ ತ್ಯಾಜ್ಯ ವಿಲೇವಾರಿ ಮಾಡಲು ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲು ಸೂಚಿಸಿದರು.

Ad
Ad
Nk Channel Final 21 09 2023
Ad