Bengaluru 21°C
Ad

ನಾನು ಯಾರ ಮೇಲೂ ದೂರೋದಿಲ್ಲ, ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದ ಬಿಎಸ್‌ವೈ

ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಂಗಳೂರಿಗೆ ಮರಳಿದ್ದು ಪೋಕ್ಸೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಬಳ್ಳಾಪುರ: ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಂಗಳೂರಿಗೆ ಮರಳಿದ್ದು ಪೋಕ್ಸೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಕ್ಸೋ ಪ್ರಕರಣ ಹಾಗೂ ಅರೆಸ್ಟ್ ವಾರಂಟ್ ಪ್ರಹಸನದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ನಿಗದಿತ ಕಾರ್ಯಕ್ರಮದ ಅಂಗವಾಗಿ ದೆಹಲಿಗೆ ತೆರಳಿದ್ದೆ. ಮೊದಲೇ ನಾನು ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದೆ.

ಆದರೂ ಕೂಡ ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವ ಕೆಲಸ ಮಾಡಿದರು ಎಂದರು. ಈಗಾಗಲೇ ಹೈಕೋರ್ಟ್ ಸಹ ಬಂಧನ ಕುರಿತು ತಡೆಯಾಜ್ಞೆ ನೀಡಿದೆ. ಈಗಲೇ ನಾನು ಯಾರ ಮೇಲೂ ದೂರೋದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

Ad
Ad
Nk Channel Final 21 09 2023
Ad