Bengaluru 27°C
Ad

ಕಬ್ಬಿನ ಗದ್ದೆಯಲ್ಲಿ ತನ್ನ ಮರಿ ಬಿಟ್ಟು ಮರೆಯಾದ ತಾಯಿ ಚಿರತೆ

ತಾಲೂಕಿನ ಪಡಗೂರು ಗ್ರಾಮದ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ತನ್ನ ಮರಿ ಬಿಟ್ಟು ಚಿರತೆ ಓಡಿ ಹೋಗಿರುವ ಘಟನೆ ನಡೆದಿದೆ.

ಗುಂಡ್ಲುಪೇಟೆ: ತಾಲೂಕಿನ ಪಡಗೂರು ಗ್ರಾಮದ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ತನ್ನ ಮರಿ ಬಿಟ್ಟು ಚಿರತೆ ಓಡಿ ಹೋಗಿರುವ ಘಟನೆ ನಡೆದಿದೆ. ಪಡಗೂರು ಗ್ರಾಮದ ಶಿವಕುಮಾರ್ ಎಂಬ ರೈತನ ಕಬ್ಬಿನ ಗದ್ದೆಯಲ್ಲಿ ತನ್ನ ಮರಿಯೊಂದಿಗೆ ಅಡಗಿ ಕುಳಿತಿದ್ದ ಚಿರತೆ ಬೇಟೆಗಾಗಿ ಜಮೀನಿನಲ್ಲಿ ಮರಿ ಬಿಟ್ಟು ಹೋಗಿದೆ. ಪಕ್ಕದ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಇದು ಬೆಳಕಿಗೆ ಬಂದಿದೆ. ನಂತರ ಜಮೀನು ಮಾಲೀಕರು ಚಿರತೆ ಮರಿಯನ್ನು ಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಯನ್ನು ಚಿರತೆ ಮರಿಯನ್ನು ವಶಕ್ಕೆ ಪಡೆದಿದ್ದಾರೆ.

Ad
300x250 2

ಪಡಗೂರು ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ದೊಡ್ಡಮಾದ ಎಂಬುವವರು ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಕುರಿಯನ್ನು ಎಳೆದೋಯ್ದು ಕೊಂದು ಹಾಕಿದೆ. ಮಾಲೀಕರು ಕೂಗಿ ಕೊಂಡ ಪರಿಣಾಮ ಕುರಿ ಬಿಟ್ಟು ಕಬ್ಬಿನ ಗದ್ದೆಯೊಳಗೆ ಚಿರತೆ ಓಡಿ ಹೋಗಿದೆ. ಘಟನೆಯಿಂದ ಕುರಿ ಮಾಲೀಕರಿಗೆ ನಷ್ಟ ಉಂಟಾಗಿದ್ದು, ಅರಣ್ಯಾಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಪಡಗೂರು ಸುತ್ತಮುತ್ತಲ ಪ್ರದೇಶ ದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ರೈತರೊಬ್ಬರ ಜಮೀನಿನಲ್ಲಿ ತನ್ನ ಮರಿಯೊ ಂದಿಗೆ ಅಡಗಿ ಕುಳಿತಿತ್ತು. ಇದೀಗ ಮರಿ ಬಿಟ್ಟು ಓಡಿ ಹೋಗಿರುವ ಚಿರತೆ ಅಕ್ಕಪಕ್ಕದ ಜಮೀನಿನಲ್ಲಿ ಓಡಾಡಿಕೊಂಡಿದೆ ಎನ್ನಲಾಗುತ್ತಿದೆ.

ಚಿರತೆ ಮರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಮೀನಿನಲ್ಲಿ ಬೋನ್ ಇರಿಸ ಲಾಗಿದ್ದು, ತಾಯಿ ಚಿರತೆಯೊಂ ದಿಗೆ ಮರಿ ಸೇರಿಸಲು ಕಾರ್ಯಾ ಚರಣೆ ನಡೆಸಲಾಗುತ್ತಿದೆ.

Ad
Ad
Nk Channel Final 21 09 2023
Ad