Bengaluru 22°C
Ad

ಮಹೀಂದ್ರಾ ಥಾರ್ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟ ಕಡವೆ: ಐವರಿಗೆ ನ್ಯಾಯಾಂಗ ಬಂಧನ

ಮಹೀಂದ್ರಾ ಥಾರ್ ವಾಹನವು ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ನಡೆದಿದೆ.

ಚಾಮರಾಜನಗರ: ಮಹೀಂದ್ರಾ ಥಾರ್ ವಾಹನವು ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಿ.ಆ‌ರ್.ಟಿ. ಹುಲಿ ಸಂರಕ್ಷಿತ ಪ್ರದೇಶ , ಯಳಂದೂರು ವನ್ಯಜೀವಿ ವಲಯದ ಲಿಂಗನಕಟ್ಟೆ ಅರಣ್ಯ ಪ್ರದೇಶದ ಸಮೀಪ ಯಳಂದೂರಿಗೆ ತೆರಳುವ ಮುಖ್ಯರಸ್ತೆಯಲ್ಲಿ ಕೆಎ 01 ಎನ್‌ 7502 ಮಹಿಂದ್ರಾ ಥಾರ್ ವಾಹನವು ಕಡವೆಗೆ ಡಿಕ್ಕಿಹೊಡೆದಿರುವ ಪರಿಣಾಮ ಕಡವೆ ಸಾವನ್ನಪ್ಪಿದೆ.

ಈ ಸಂಭಂಧ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವರುಣ್ ಜಿ , ಬೆಂಗಳೂರಿನ ಗೊಲ್ಲರಹಟ್ಟಿ ಪ್ರಶಾಂತ್ ಎನ್ ಪಿ , ಅಂಕಿತ್ ಆರ್ ಬೆಂಗಳೂರಿನ ಎಸ್.ಆರ್.ಎಸ್ ಲೇಔಟ್ ಎಂ ವರ್ಣೆಕರ್, ದಾವಣಗೆರೆ ಯ ವಿವೇಕಾನಂದ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Ad
Ad
Nk Channel Final 21 09 2023
Ad