Bengaluru 24°C
Ad

ಅಪರೂಪದ ಘಟನೆ : ನೀರು ಕುಡಿಯಲು ಹೋದ ಪಾರಿವಾಳವನ್ನೇ ಬೇಟೆಯಾಡಿದ ಮೊಸಳೆ

ಮೊಸಳೆಯೊಂದು ಪಾರಿವಾಳವನ್ನು ಬೇಟೆಯಾಡಿದ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಪಿಲಾ ಹಿನ್ನೀರಿನಲ್ಲಿ ನಡೆದಿದೆ.

ಚಾಮರಾಜನಗರ : ಮೊಸಳೆಯೊಂದು ಪಾರಿವಾಳವನ್ನು ಬೇಟೆಯಾಡಿದ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಪಿಲಾ ಹಿನ್ನೀರಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಯಡಕುರಿಯಾ ಗ್ರಾಮದ ಬಳಿ ಇರುವ ಕಾವೇರಿ ಕಪಿಲ ನದಿಯ ಹಿನ್ನೀರಿನಲ್ಲಿ ಘಟನೆ ನಡೆದಿದೆ.

ಹಿನ್ನೀರಿನಲ್ಲಿ ಬಾಯಾರಿದ ಪರಿವಾಳಗಳು ನೀರು ಕುಡಿಯಲು ಹೋದಾಗ ಬೇಟೆಗಾಗಿ ಹೊಂಚು ಹಾಕುತ್ತಿದ್ದ ಮೊಸಳೆಯೊಂದು ಪಾರಿವಾಳವೊಂದನ್ನು ಕ್ಷಣಾರ್ಧದಲ್ಲಿ ನೀರಿನೊಳಗೆ ಎಳೆದೊಯ್ದಿದೆ.

ಘಟನಾ ಸ್ಥಳದಲ್ಲಿ ಇದ್ದಂತಹ ವ್ಯಕ್ತಿಯೊಬ್ಬರು ದೃಶ್ಯವನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.

Ad
Ad
Nk Channel Final 21 09 2023
Ad