Bengaluru 22°C
Ad

ನಟ ದರ್ಶನ್​​ ನ ಕರಾಳ ಮುಖ ಬಿಚ್ಚಿಟ್ಟ ಕೂಲಿ ಕಾರ್ಮಿಕ

Wage

ಬೆಂಗಳೂರು: ನಟ ದರ್ಶನ್​​ ಕರಾಳ ಮುಖವನ್ನು ಅಲ್ಲೇ ಕೂಲಿ ಮಾಡಿದ್ದ, ಸದ್ಯ ಹಾಸಿಗೆ ಹಿಡಿದ ವ್ಯಕ್ತಿಯೊಬ್ಬರು ಬಿಚ್ಚಿಟ್ಟಿದ್ದಾರೆ. 8 ವರ್ಷದಿಂದ ಕೂಲಿ ಮಾಡಿ ಕೊನೆಗೆ ತೊಂದರೆ ಆದಾಗ ಸಹಾಯ ಮಾಡದೆ ನೋವು ಕೊಟ್ಟ ಕಾಟೇರನ ಇನ್ನೊಂದು ಮುಖವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮಹೇಶ್​ ಎಂಬ ಕೂಲಿ ಕಾರ್ಮಿಕ ನಟ ದರ್ಶನ್​ ಬಗ್ಗೆ ಮಾತನಾಡಿದ್ದಾರೆ. “ಅಂದು ದರ್ಶನ್​ ಸಾಹೇಬ್ರು ಎತ್ತಿಗೆ ಲಾಲ ಕಟ್ಟಿಸಿಬಿಡಪ್ಪ ಎಂದು ಹೇಳಿ ಅವರ ಪಾಡಿಗೆ ಎಲ್ಲಿಗೆ ಹೋದ್ರು ಗೊತ್ತಿಲ್ಲ. ಬಳಿಕ ಎತ್ತು ಹಿಡಿಯಲು ಹೋದಾಗ ಅದರ ಕೊಂಬು ಕಣ್ಣಿಗೆ ಹೊಡೆದುಬಿಟ್ಟಿತು. ಕೊಂಬು ತಾಗಿದಂತೆ ಕಣ್ಣು ತಲೆಯಲ್ಲಿ ಬಂದುಬಿಟ್ಟಿತು. ತಕ್ಷಣವೇ ಅಲ್ಲೇ ಬಿದ್ದುಬಿಟ್ಟೆ. ನಂತರ ಚಿಕಿತ್ಸೆ ಕೊಡಿಸಿದರು. ಬಳಿಕ ಅವರ ಕಡೆಯವರು ನನ್ನನ್ನು ಮನೆಗೆ ಬಿಟ್ಟುಹೋದ್ರು.

ಬಳಿಕ ದರ್ಶನ್​ ಬಳಿ ಸಹಾಯ ಕೇಳಿದೆ. ಅದಕ್ಕೆ ದರ್ಶನ್​​ ನಾನು ಇದ್ದೀನಿ. ವ್ಯವಸ್ಥೆ ಮಾಡಿಕೊಡ್ತೀನಿ ಎಂದು ಹೇಳಿದ್ರೆ ಹೊರತು ಏನು ಮಾಡಿಕೊಡಲಿಲ್ಲ. ಪರಿಹಾರ ಕೇಳಲು ಹೋದಾಗ ಗೇಟು ಬೀಗ ಹಾಕಿ ನಾಯಿ ಬಿಟ್ಟುಬಿಟ್ರು. ಗೇಟು ಬೀಗ ತೆಗಿ ಎಂದು ಹೇಳಿದ್ರೆ ಸಾಹೇಬ್ರು ಹೇಳಿದ್ದಾರೆ ಗೇಟು ಬೀಗ ತೆಗಿಬೇಡ ಎಂದು ಅವರು ಹೇಳಿದ್ರೆ ತೆಗಿತೀನಿ. ಹೋಗಿ ಹೋಗಿ ಎಂದು ನಮ್ಮನ್ನ ಕಳುಹಿಸಿದರು.

Ad
Ad
Nk Channel Final 21 09 2023
Ad