News Karnataka Kannada
Monday, April 29 2024
ಬೆಂಗಳೂರು

ಆಟ ಸೋತರು ತನ್ನ ಅತ್ಯುತ್ತಮ ದಾಖಲೆಯಿಂದ ಫ್ಯಾನ್ಸ್‌ ಮನ ಗೆದ್ದ ಕೊಹ್ಲಿ

ಇಂದಿಗೆ ಐಪಿಎಲ್‌ ಪಂದ್ಯ ಶುರುವಾಗಿ ಒಂದು ವಾರ ಕಳೆದಿದೆ. ಈವರೆಗೆ 10 ಪಂದ್ಯಗಳು ನೆಡದಿವೆ. ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್​ಗಳ ವಿಜಯದ ಜಯಭೇರಿ ಭಾರಿಸಿದೆ.
Photo Credit : NewsKarnataka

ಬೆಂಗಳೂರು: ಇಂದಿಗೆ ಐಪಿಎಲ್‌ ಪಂದ್ಯ ಶುರುವಾಗಿ ಒಂದು ವಾರ ಕಳೆದಿದೆ. ಈವರೆಗೆ 10 ಪಂದ್ಯಗಳು ನೆಡದಿವೆ. ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್​ಗಳ ವಿಜಯದ ಜಯಭೇರಿ ಭಾರಿಸಿದೆ.

ಆರ್​ಸಿಬಿ ಬೌಲಿಂಗ್​ನಲ್ಲಿ ಮತ್ತೊಮ್ಮೆ ಸಂಪೂರ್ಣ ವಿಫಲವಾಯಿತು. ಬ್ಯಾಟಿಂಗ್​ನಲ್ಲಿ ಕೊಹ್ಲಿ ಬಿಟ್ಟರೆ ಮತ್ಯಾರು ಮಿಂಚಲಿಲ್ಲ. ಇಂದು ಐಪಿಎಲ್​ನಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಲಖನೌದಲ್ಲಿ ಹೈವೋಲ್ಟೇಜ್ ಪಂದ್ಯ ಆಯೋಜಿಸಲಾಗಿದೆ.

ಆರಂಭದಲ್ಲಿ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ವಿರಾಟ್‌ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ ಅಜೇಯ 86 ರನ್‌ ಕಲೆಹಾಕಿದರು. ಈ ಪಂದ್ಯದಲ್ಲಿ ಭರ್ಜರಿ 4 ಸಿಕ್ಸರ್‌ ಸಿಡಿಸಿದ ವಿರಾಟ್‌ ಕಡಕಡಾರ್‌ ವಿರುದ್ಧ ಆಟ ಸೋತರು ಆರ್‌ಸಿಬಿ ಪರ ದಾಖಲೆಯೊಂದನ್ನು ಬರೆದಿದ್ದಾರೆ.

ಈ ಪಂದ್ಯದಲ್ಲಿ 4 ಸಿಕ್ಸರ್‌ ಸಿಡಿಸುವ ಮೂಲಕ ಕೊಹ್ಲಿ ಐಪಿಎಲ್‌ ನಲ್ಲಿ 241‌ ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೂಲಕ ಕ್ರಿಸ್‌ ಗೇಲ್‌ ಹಾಗೂ ಎಬಿ ಡಿವಿಲಿಯರ್ಸ್‌ ದಾಖಲೆಯನ್ನು ಆರಸೊಬಿ ಮುರಿದಿದೆ.

ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ, ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿರುವ ಮೂರು ಪಂದ್ಯಗಳಲ್ಲಿ ಒಟ್ಟು 181 ರನ್ ಗಳಿಸಿದ್ದಾರೆ. ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಆಡಿರುವ ಎರಡು ಪಂದ್ಯಗಳಲ್ಲಿ 143 ರನ್ ಕಲೆಹಾಕಿದ್ದಾರೆ. ರಾಜಸ್ಥಾನ್ ತಂಡದ ರಿಯಾನ್ ಪರಾಗ್ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಇವರು ಆಡಿರುವ ಎರಡು ಪಂದ್ಯಗಳಿಂದ 127 ರನ್ ಸಿಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು