News Karnataka Kannada
Monday, April 29 2024
ಬೆಂಗಳೂರು

ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 7 ವಿಕೆಟ್‌ಗಳ ಹೀನಾಯ ಸೋಲು..ಇದಕ್ಕೆ ಕಾರಣ ಇಲ್ಲಿದೆ

ನೆನ್ನೆ ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​​ ಗೆಲುವಿನ ನಗೆ ಬೀರಿದೆ.
Photo Credit : NewsKarnataka

ಬೆಂಗಳೂರು: ನೆನ್ನೆ ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​​ ಗೆಲುವಿನ ನಗೆ ಬೀರಿದೆ.

ಆರ್​​ಸಿಬಿ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್​ ಕೇವಲ 16.5 ಓವರ್​ಗಳಲ್ಲಿ 186 ರನ್​ ಗಳಿಸೋ ಮೂಲಕ ಗೆದ್ದು ಬೀಗಿದೆ. ಕೆಕೆಆರ್​ ಪರ ಸುನಿಲ್​ ನರೈನ್​ 47, ವೆಂಕಟೇಶ್​ ಅಯ್ಯರ್​​ 50, ಸಾಲ್ಟ್​​ 30, ಶ್ರೇಯಸ್​​ ಅಯ್ಯರ್​​ 39, ರಿಂಕು ಸಿಂಗ್​ 5 ರನ್​ ಗಳಿಸಿದ್ದಾರೆ.ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಅಜೇಯರಾಗಿ ಉಳಿದರು. ಕೇವಲ 59 ಬಾಲ್​ನಲ್ಲಿ 4 ಸಿಕ್ಸರ್​​, 4 ಫೋರ್​ ಸಮೇತ 83 ರನ್​ ಸಿಡಿಸಿದ್ರು.

ಮೊದಲಿಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಹರ್ಷಿತ್​ ರಾಣಾ 2ನೇ ಓವರಿನ 5ನೇ ಬಾಲ್​ನಲ್ಲಿ ಭರ್ಜರಿ ಸಿಕ್ಸರ್​​ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್​ಗೆ ಸಿಕ್ಸರ್​​ ಬಾರಿಸಲು ಹೋದ ಫಾಫ್​ ಕ್ಯಾಚ್​ ನೀಡಿದ್ರು. ಬಳಿಕ ಕ್ಯಾಮೆರಾನ್ ಗ್ರೀನ್​ ಕೂಡ 2 ಸಿಕ್ಸರ್​​, 4 ಫೋರ್​ ಸಮೇತ 33 ರನ್​ ಗಳಿಸಿದ್ರು.

ಕ್ಯಾಮರಾನ್​ ಗ್ರೀನ್​ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್​ ಬೀಸಿದ್ರು. ಕೇವಲ 19 ಬಾಲ್​​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 29 ರನ್​ ಸಿಡಿಸಿದ್ರು. ಎರಡು ಬಾರಿ ಮ್ಯಾಕ್ಸ್​ವೆಲ್​ಗೆ ಲೈಫ್​ ಸಿಕ್ಕಿತು. ಕೊನೆಗೆ ಸುನಿಲ್​ ನರೈನ್​​​ ಬೌಲಿಂಗ್​ನಲ್ಲಿ 14ನೇ ಓವರ್​ನಲ್ಲಿ ಮತ್ತೆ ಸಿಕ್ಸ್​ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್​ಗೆ ಕ್ಯಾಚ್​ ನೀಡಿದ್ರು.

ಕೊನೆಗೆ ಬಂದ ದಿನೇಶ್​ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಮೂರು ಸಿಕ್ಸರ್​​ ಸಮೇತ ದಿನೇಶ್​ ಕಾರ್ತಿಕ್​​ 20 ರನ್​ ಸಿಡಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಪೇರಿಸಿ 183 ರನ್​ಗಳ ಗುರಿ ನೀಡಿತ್ತು. ಇದರಿಂದ ಆರ್‌ಸಿಬಿ ಹಿನಾಯ ಸೋಲು ಅನುಭವಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು